Tuesday, October 21, 2025
Flats for sale
Homeವಿದೇಶವಾಷಿಂಗ್ಟನ್ : ಅತ್ಯಧಿಕ ಸುಂಕ : 50 ಕ್ಕೂ ಹೆಚ್ಚು ದೇಶಗಳು ಟ್ರಂಪ್ ಮಾತುಕತೆ ನಡೆಸಲು...

ವಾಷಿಂಗ್ಟನ್ : ಅತ್ಯಧಿಕ ಸುಂಕ : 50 ಕ್ಕೂ ಹೆಚ್ಚು ದೇಶಗಳು ಟ್ರಂಪ್ ಮಾತುಕತೆ ನಡೆಸಲು ನಿರ್ಧಾರ..!

ವಾಷಿಂಗ್ಟನ್ : ಜಗತ್ತಿನ ವಿವಿಧ ದೇಶಗಳಿಂದ ಅಮೆರಿಕಾಕ್ಕೆ ಬರುವ ಉತ್ಪನ್ನಗಳ ಮೇಲೆ ಅತ್ಯಧಿಕ ಸುಂಕ ವಿಧಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದಿಂದ ತತ್ತರಿಸಿ ಹೋಗಿರುವ 5೦ ಕ್ಕೂ ಹೆಚ್ಚು ರಾಷ್ಟçಗಳು ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ನಡೆಸಲು ಮುಂದಾಗಿವೆ. ಹುಚ್ಚು ದೊರೆಯ ನಿರ್ಧಾರದಿಂದ ಆಗುತ್ತಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ಮತ್ತು ಆರ್ಥಿಕ ಕುಸಿತದಿಂದ ಪಾರಾಗಲು ಅಮೆರಿಕಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ಎದುರಾಗಿರುವ ಸಮಸ್ಯೆಗೆ ಪರಿಹಾರ
ಕಂಡುಕೊಳ್ಳಲು ನಿರ್ಧರಿಸಿವೆ ಎನ್ನಲಾಗಿದೆ.

ವಿವಿಧ ದೇಶಗಳ ಉತ್ಪನ್ನಗಳ ಮೇಲೆ ಮನಸೋ ಇಚ್ಚೆ ಸುಂಕ ವಿಧಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಸುಮಾರು 6 ಟ್ರಿಲಿಯನ್ ಡಾಲರ್ ಮೌಲ್ಯದಷ್ಟು ಕುಸಿತ ಕಂಡಿದೆ. ಇದರ ಜೊತೆಗೆ ಜಗತ್ತಿನ ವಿವಿಧ ದೇಶಗಳ ಮೇಲೆ ಆಗುತ್ತಿರುವ ಆರ್ಥಿಕ ಸಂಕಷ್ಠ ಮತ್ತು ಹಿಂಜರಿತದಿಂದ ಪಾರಾಗಲು ಮಾತುಕತೆಗೆ ಮುಂದಾಗಿವೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಡೊನಾಲ್ಡ್ ಟ್ರಂಪ್ ಅವರ ಉನ್ನತ ಆರ್ಥಿಕ ಸಲಹೆಗಾರರು ಸುಂಕಗಳನ್ನು ಜಾಗತಿಕ ವ್ಯಾಪಾರಕ್ರಮದಲ್ಲಿ ಅಮೆರಿಕವನ್ನು ಬುದ್ಧಿವಂತಿಕೆಯಿAದ ಮರುಸ್ಥಾಪನೆ ಎಂದು ಚಿತ್ರಿಸಲು ಪ್ರಯತ್ನಿಸಿದ್ದು ಏಷ್ಯನ್ ಷೇರು ಮಾರುಕಟ್ಟೆಗಳ ನಿರೀಕ್ಷಿತ ಉಬ್ಬರವಿಳಿತದ ಆರಂಭಕ್ಕೆ ಮುAಚಿತವಾಗಿ ಎದುರಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುAದಾಗಿರುವುದಾಗಿ ಮಾಹಿತಿ ಹಂಚಿಕೊAಡಿದ್ದಾರೆ.

ಕಳೆದ ಬುಧವಾರದ ಘೋಷಣೆಯ ನಂತರ 50 ಕ್ಕೂ ಹೆಚ್ಚು ರಾಷ್ಟçಗಳು ಅಮೆರಿಕದೊಂದಿಗೆ ಮಾತುಕತೆ ಪ್ರಾರಂಭಿಸಿವೆ, ಇದು ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದ ಸ್ಥಾನದಲ್ಲಿರಿಸಿದೆ ಎಂದು ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ. ಬೆಸೆಂಟ್ ಅಥವಾ ಇತರ ಅಧಿಕಾರಿಗಳು ದೇಶಗಳನ್ನು ಹೆಸರಿಸಲಿಲ್ಲ ಅಥವಾ
ಮಾತುಕತೆಗಳ ಬಗ್ಗೆ ವಿವರಗಳನ್ನು ನೀಡಲಿಲ್ಲ. ಆದರೆ ಏಕಕಾಲದಲ್ಲಿ ಬಹು ದೇಶಗಳೊಂದಿಗೆ ಮಾತುಕತೆ ನಡೆಸುವುದು ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ವ್ಯವಸ್ಥಾಪನಾ ಸವಾಲನ್ನು ಒಡ್ಡಬಹುದು ಮತ್ತು ಆರ್ಥಿಕ ಅನಿಶ್ಚಿತತೆಯನ್ನು ಹೆಚ್ಚಿಸಬಹುದು ಎಂದು ಹೇಳಲಾಗಿದೆ.

ಷೇರು ಮಾರುಕಟ್ಟೆ ಕುಸಿತ ಕಡಿಮೆ ಮಾಡಿದರು ಮತ್ತು ಸುಂಕಗಳ ಆಧಾರದ ಮೇಲೆ ಆರ್ಥಿಕ ಹಿಂಜರಿತ ನಿರೀಕ್ಷಿಸಲು “ಯಾವುದೇ ಕಾರಣವಿಲ್ಲ” ಎಂದು ನಿರೀಕ್ಷೆಗಿಂತ ಬಲವಾದ ಅಮೇರಿಕಾದ ಉದ್ಯೋಗಗಳ ಬೆಳವಣಿಗೆಯನ್ನು ಉಲ್ಲೇಖಿಸಿ ಸಮಸ್ಯೆಗೆ ಪರಿಹಾರ ಎರಡೂ ಕಡೆ ಕಂಡುಕೊಳ್ಳಬೇಕಾಗಿದೆ ಎAದು ಮಾಹಿತಿ ನೀಡಿದ್ದಾರೆ.

ಸುಂಕ ಏರಿಕೆಯಿಂದ ಒಟ್ಟು ದೇಶೀಯ ಉತ್ಪನ್ನ ಶೇಕಡಾ ೦.3 ರಷ್ಟು ಕುಸಿಯಲು ಕಾರಣವಾಗುತ್ತದೆ ಎಂದು ಅಂದಾಜಿಸಿದ್ದಾರೆ, ಹಿಂದಿನ ಅAದಾಜಿನ ಪ್ರಕಾರ 1.3 ಶೇಕಡಾ ಬೆಳವಣಿಗೆಗಿಂತ ಕಡಿಮೆಯಾಗಿದೆ ಮತ್ತು ನಿರುದ್ಯೋಗ ದರ ಈಗ ಶೇಕಡಾ 4.2 ರಿಂದ ಶೇಕಡಾ 5.3 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular