ಲಾಹೋರ್ : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ದಲ್ಲಿ ಕಳೆದ ೬೪ ವರ್ಷಗಳಿಂದ ಪಾಳು ಬಿದ್ದ ಹಿಂದೂ ದೇವಾಲಯದ ಜೀರ್ಣೋದ್ದಾರಕ್ಕೆ ಈಗ ಪಾಕ್ ಸರ್ಕಾರ ಮೊದಲ ಹಂತದಲ್ಲಿ ಒಂದು ಕೋಟಿ ರೂ. ಅನುದಾನ ನೀಡಿದೆ. ರಾವಿ ನದಿಯ ಪಶ್ಚಿಮ ದಂಡೆಯಲ್ಲಿರುವ ನರೋವಾಲ್ ನಗರ ಬಳಿ ಇರುವ ಜಾಫರ್‌ವಾಲ್ ಪಟ್ಟಣದಲ್ಲಿ ಬಯೊಲಿ ಸಾಹೇಬ್ ದೇವಾಲಯ 60 ವರ್ಷಗಳಿಂದ ಪಾಳುಬಿದ್ದಿತ್ತು. ಆದರೀಗ ಪಾಕಿಸ್ತಾನದ ಅಲ್ಪ ಸಂಖ್ಯಾತರ ಆರಾಧನಾ ಸ್ಥಳದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂಸ್ಥೆ ಈಗ ಈ ದೇವಾಲಯದ ಜೀಣೋದ್ಧಾರ ಕಾರ್ಯ ಆರಂಭಿಸಿದೆ.
ನರೋವಾಲ್‌ನಲ್ಲಿ 1,453ಕ್ಕಿಂತಲೂ ಹೆಚ್ಚು ಹಿಂದೂಗಳಿದ್ದು ಅವರಿಗೆಲ್ಲರೂ ಈಗ ಆರಾಧನಾ ಸ್ಥಳವಿಲ್ಲದೇ ತೊಂದರೆ ಎದುರಿಸುತ್ತಿದ್ದಾರೆ. ಪಾಕಿಸ್ತಾನ ದೇಶ ರಚನೆಯಾದ ಕಾಲದಲ್ಲಿ ನರೋವಾಲ್ ಜಿಲ್ಲೆಯಲ್ಲಿ 45 ದೇವಾಲಯಗಳಿದ್ದವು. ಆದರೆ ಕಾಲಾನಂತರದಲ್ಲಿ ಅವೆಲ್ಲವೂ ಶಿಥಿಲಗೊಂಡವು. ಕಳೆದ 20 ವರ್ಷಗಳಿಂದ ಬಯೊಲಿ ಸಾಹೇಬ್ ದೇವಾಲಯದ ಜೀರ್ಣೋದ್ಧಾರಕ್ಕೆ ಅಲ್ಪಸಂಖ್ಯಾತರ ಆರಾಧನಾ ಉಸ್ತುವಾರಿ ಸಂಸ್ಥೆಯನ್ನು ಸರ್ಕಾರವನ್ನು ಒತ್ತಾಯಿಸುತ್ತಿದೆ.
ಪಾಕಿಸ್ತಾನ ಸರ್ಕಾರದ ಲೆಕ್ಕಾಚಾರ ಪ್ರಕಾರ ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳಿದ್ದಾರೆ. ಆದರೆ 90 ಲಕ್ಷಕ್ಕೂ ಅಧಿಕ ಹಿಂದೂಗಳು ಈ ದೇಶದಲ್ಲಿದ್ದಾರೆ. ಪಾಕ್‌ನಲ್ಲಿರುವ ಹಿಂದೂ ಗಳಲ್ಲಿ ಹೆಚ್ಚಿನವರು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.