Wednesday, March 12, 2025
Flats for sale
Homeವಿದೇಶಲಂಡನ್ : ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮೇಲೆ ದಾಳಿಗೆ ಖಲಿಸ್ತಾನಿ ಉಗ್ರರ ಯತ್ನ..!

ಲಂಡನ್ : ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮೇಲೆ ದಾಳಿಗೆ ಖಲಿಸ್ತಾನಿ ಉಗ್ರರ ಯತ್ನ..!

ಲಂಡನ್ : ಚಾಥಮ್ ಹೌಸ್‌ನ ಚಿಂತಕರ ಛಾವಡಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾರಿನಲ್ಲಿ ಹೊರಡುತ್ತಿದ್ದ ವೇಳೆ ಖಲಿಸ್ತಾನಿ ಉಗ್ರರು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಲಂಡನ್ ನಲ್ಲಿ ನಡದಿದೆ.

ಜೊತೆಗೆ ದಾಳಿ ನಡೆಸಲು ಯತ್ನಿಸಿದ ವ್ಯಕ್ತಿ ಭಾರತೀಯ ಧ್ವಜವನ್ನು ಹರಿದು ಹಾಕಿರುವ ಘಟನೆ ಭಾರತೀಯ ಸಮುದಾಯವನ್ನು ಬೆಚ್ಚಿ ಬೀಳಿಸಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಡಾ. ಎಸ್ ಜೈಶಂಕರ್ ಅವರ ವಾಹನದ ಕಡೆಗೆ ಓಡಿಬಂದ ವ್ಯಕ್ತಿ ಮತ್ತು ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆ ಭಾರತದ ರಾಷ್ಟçಧ್ವಜವನ್ನು ಹರಿದು ಹಾಕುವುದನ್ನು ತೋರಿಸುತ್ತದೆ

ವಿಧ್ವಂಸಕ ಕೃತ್ಯ ನಡೆದರೂ ಅಧಿಕಾರಿಗಳು ಸ್ಪಂದಿಸದಿರುವುದು ಕಂಡು ಬಂದಿದೆ. ಸಚಿವ ಜೈಶಂಕರ್ ಚರ್ಚೆಯಲ್ಲಿ ಭಾಗವಹಿಸಿದ್ದ ಸ್ಥಳದ ಹೊರಗೆ ಕೆಲವು ಖಲಿಸ್ತಾನ್ ಪರ ಬೆಂಬಲಿಗರು ಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ .ಆದರೂ ಲಂಡನ್ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಮಾರ್ಚ್ ೪ರಿಂದ ೯ರ ವರೆಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಡಾ. ಜೈಶಂಕರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಅಲ್ಲಿ ಅವರು ತಮ್ಮ ಬ್ರಿಟಿಷ್ ಸಹವರ್ತಿ ಡೇವಿಡ್ ಲ್ಯಾಮಿ ಮತ್ತು ಇತರ ಪ್ರಮುಖ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದಾರೆ.

ವ್ಯಾಪಾರ, ಆರೋಗ್ಯ, ಶಿಕ್ಷಣ, ಜನರಿಂದ ಜನರ ನಡುವಿನ ಸಂಬAಧಗಳು ಮತ್ತು ರಕ್ಷಣಾ ಸಹಕಾರವನ್ನು ಒಳಗೊಂಡ ಭಾರತ – ಇಂಗ್ಲೆಂಡ್ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ಮಾರ್ಚ್ ಇಂದು ಮತ್ತು ನಾಳೆ ಐರ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಐರಿಶ್ ವಿದೇಶಾಂಗ ಸಚಿವ ಸೈಮನ್ ಹ್ಯಾರಿಸ್ ಅವರನ್ನು ಭೇಟಿಯಾಗಲು, ಇತರ ಅಧಿಕಾರಿಗಳೊಂದಿಗೆ ಸಂವಾದ ನಡೆಸಲು ಮತ್ತು ಭಾರತೀಯ ವಲಸೆಗಾರರೊಂದಿಗೆ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular