Monday, February 2, 2026
Flats for sale
Homeವಿದೇಶಲಂಡನ್ : ಬ್ರಿಟನ್ ನಲ್ಲಿ ಖಾಲಿಸ್ತಾನ ಪರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ,ಆಸ್ತಿಪಾಸ್ತಿ ಮುಟ್ಟುಗೋಲು.

ಲಂಡನ್ : ಬ್ರಿಟನ್ ನಲ್ಲಿ ಖಾಲಿಸ್ತಾನ ಪರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ,ಆಸ್ತಿಪಾಸ್ತಿ ಮುಟ್ಟುಗೋಲು.

ಲಂಡನ್ : ಬ್ರಿಟನ್ನಿನಲ್ಲಿ ಇದೇ ಮೊದಲ ಬಾರಿಗೆ ಖಾಲಿಸ್ತಾನ ಪರ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿಷೇಧಿತ ಉಗ್ರಗಾಮಿ ಗುಂಪಿನ ಮೇಲೆ ಆರ್ಥಿಕ ನಿರ್ಬಂಧ ಹೇರಿರುವುದಲ್ಲದೆ, ಗುಂಪಿಗೆ ಸಂಬAಧಿಸಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಭಾರತದ ಸಿಖ್ ಮೂಲದ ಬ್ರಿಟಿಷ್ ಉದ್ಯಮಿ ಗುರುಪ್ರೀತ್ ಸಿಂಗ್ ರೈಹಾಲ್‌ಗೆ ಸೇರಿದ ಆಸ್ತಿಪಾಸ್ತಿಗಳನ್ನು ಬ್ರಿಟನ್ನಿನ ಖಜಾನೆ ಇಲಾಖೆ ಸ್ವಾಧೀನಪಡಿಸಿಕೊಂಡಿದ್ದು ಆತ ಯಾವುದೇ
ಸಂಸ್ಥೆಯಲ್ಲಿ ನಿರ್ದೇಶಕರಾಗಲಿ ಅಥವಾ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಹೊಂದುವುದನ್ನೂ ನಿರ್ಬಂಧಿಸಿದೆ.

ಬಬ್ಬರ್ ಖಾಲ್ಸಾ ಹಾಗೂ ಬಬ್ಬರ್ ಅಕಾಲಿ ಲೆಹರ್ ಗುಂಪಿನ ನೇಮಕಾತಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ರೈಹಾಲ್ ಮೇಲಿದೆ. ಈ ಗುಂಪುಗಳಿಗೆ ಹಣಕಾಸಿನ ನೆರವು ಸಂಗ್ರಹಿಸಿ ಕೊಟ್ಟಿರುವುದಲ್ಲದೆ, ಶಸ್ತಾçಸ್ತç ಹಾಗೂ ಮಿಲಿಟರಿ ಉಪಕರಣಗಳನ್ನು ಖರೀದಿಸುವುದಕ್ಕೂ ರೈಹಾಲ್ ಸಹಾಯ ಮಾಡಿದ್ದಾನೆ. ಉಗ್ರರ ವಿರುದ್ಧ ಕಠಿಣ ಕ್ರಮ-ಲೂಸಿ: ಭಯೋತ್ಪಾದನೆ ವಿರುದ್ಧ ನಾವು ಸುಮ್ಮನಿರುವುದಿಲ್ಲ. ಬ್ರಿಟನ್ನಿನ ಹಣಕಾಸು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಭಯೋತ್ಪಾದಕರಿಗೆ ಹಣಕಾಸು ನೆರವು ತಡೆಯಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಬ್ರಿಟನ್ನಿನ ಲೂಸಿ ರಿಗ್ಬಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular