ರಿಯಾದ್ : 2030 ಕ್ಕೆ ಸೌದಿ ಅರೇಬಿಯಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ಯೋಜನೆಯ ಭಾಗವಾಗಿ ದಶಕಗಳಿಂದ ಚಾಲ್ತಿಯಲ್ಲಿದ್ದ ಕಫಾಲ್ (ಪ್ರಾಯೋಜಕತ್ವ) ವ್ಯವಸ್ಥೆಯನ್ನು ಅಧಿಕೃತವಾಗಿ ಸೌದಿ ಅರೇಬಿಯಾ ರದ್ದುಗೊಳಿಸಿದೆ. ಕಾರ್ಮಿಕ ಶೋಷಣೆಯ ಈ ಪದ್ಧತಿ ರದ್ದತಿಯಿಂದ 25 ಲಕ್ಷ ಭಾರತೀಯರು ಸೇರಿದಂತೆ 1 ಕೋಟಿ ವಿದೇಶಿ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.
1950 ರಲ್ಲಿ ಜಾರಿಯಾದ ಕಫಾಲ್ ವ್ಯವಸ್ಥೆಯು ವಿದೇಶಿ ಕಾರ್ಮಿಕರ ವೀಸಾ ಹಾಗೂ ಕಾನೂನು ಮಾನ್ಯತೆ ತಮಗೆ ಕೆಲಸ ನೀಡಿದವನ ನಿಯಂತ್ರಣದಲ್ಲೇ ಇರಬೇಕಾಗಿತ್ತು. ಅಲ್ಲದೇ ಯಾವೊಬ್ಬ ಕಾರ್ಮಿಕನು ತನ್ನ ಕೆಲಸ ಬದಲಿಸಲು, ವೀಸಾ ನವೀಕರಿಸಲು ಹಾಗೂ ದೇಶ ತೊರೆಯಲು ಪ್ರಾಯೋಜಕತ್ವ ನೀಡಿದವನ ಅನುಮತಿ ಕಡ್ಡಾಯವಾಗಿತ್ತು.
ಈಗ ಅದರ ಅಗತ್ಯವಿಲ್ಲ. ಕಫಾಲ್ ನೀತಿಯಿಂದಾಗಿ ಕಾರ್ಮಿಕನು ಶೋಷಣೆಗೆ ಒಳಗಾಗುತ್ತಿದ್ದಾನೆ. ಅಲ್ಲದೆ ಆತನಿಗೆ ಸಂಬಳ ನೀಡದೆ ಆತನ ಪಾಸ್‌ಪೋರ್ಟ್ ವಶಪಡಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಾನವ ಹಕ್ಕುಗಳ ಸಂಸ್ಥೆ ದೂರಿದ್ದವು. ಸೌದಿ ಅರೇಬಿಯಾ ೨೦೩೦ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ಗುರಿ ಹಾಗೂ ವಿದೇಶಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಸೌದಿ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಅವರ ಯೋಜನೆಯ ಭಾಗವಾಗಿ ಕಫಾಲ್ ನೀತಿ ರದ್ದುಪಡಿಸಲಾಗಿದೆ


