ರಿಪ್ಪನ್ ಪೇಟೆ : ಹೊಸನಗರ ತಾಲೂಕಿನ ಕರಿಮನೆ ಗ್ರಾಮದ ಕನ್ನಳ್ಳಿ ಊರಿನ ಮಧ್ಯೆ ಸರ್ವೆ ನಂ. ೧೦೬ ರಲ್ಲಿ (ಮಜರೆ ಕನ್ನಳ್ಳಿ) ಗ್ರಾಮ ಪಂಚಾಯ್ತಿ ಯಿಂದ ಬೆಳೆಸಿರುವ ಕನಿಷ್ಠ ೨೫ ರಿಂದ ೩೦ ಲಕ್ಷ ಬೆಲೆಬಾಳುವ ಅಕೇಶಿಯಾ ಮರಗಳನ್ನು ಹರಾಜು ಪ್ರಕ್ರಿಯೆ ಇಲ್ಲದೇ ಕಡಿತಲೆ ಮಾಡಿ ಕರಿಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಸೇರಿ ಗ್ರಾಮ ಸಭೆಯನ್ನು ಕರೆಯದೇ ಕಾನೂನು ಬಾಹಿರವಾಗಿ ಗುತ್ತಿಗೆದಾರನಿಗೆ ಕಡಿಮೆ ದರದಲ್ಲಿ ಅಕ್ರಮವಾಗಿ ಮಾರಟ ಮಾಡಿದ್ದಾರೆ ಎಂದು ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತಿ ದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಿ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ.
ಸಾರ್ವಜನಿಕ ಮಾಹಿತಿ ಪ್ರಕಾರ ೮.೫೦ ಲಕ್ಷ ರೂಪಾಯಿಗೆ ಹೊಂದಾಣಿಕೆ ವ್ಯಾಪಾರ ಮಾಡಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ. ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಗುತ್ತಿಗೆದಾರ ವ್ಯಕ್ತಿವೊಬ್ಬರಿಗೆ ೨೫ ರಿಂದ ೩೦ ಲಕ್ಷ ಬೆಲೆ ಬಾಳುವ ೭೫೦ಕ್ಕೂ ಹೆಚ್ಚು ಮರಗಳನ್ನು ಹೊಂದಾಣಿಕೆ ಮೂಲಕ ಅಕ್ರಮವಾಗಿ ಕಡಿತಲೆ ಮಾಡಲು ಅನುಮತಿ ನೀಡಿ ಗುತ್ತಿಗೆದಾರರಿಂದ ೧೦ ಲಕ್ಷಕ್ಕೂ ಹೆಚ್ಚಿಗೆ ಹಣ ಪಡೆದುಕೊಂಡು ಅಕ್ರಮ ವೆಸಗಿದ್ದಾರೆ, ಅರಣ್ಯ ಇಲಾಖೆ ಸಹ ಅಕ್ರಮ ಕಡಿತಲೆ ಮಾಡಲು ಗುತ್ತಿಗೆದಾರರಿಗೆ ಸಂಪೂರ್ಣ ಅವಕಾಶ ನೀಡಿದ್ದಾರೆ, ಅರಣ್ಯ ಇಲಾ ಖೆಗೆ ಮತ್ತು ಸಂಚಾರಿ ದಳಕ್ಕೆ ಸಾರ್ವಜನಿಕರು ದೂರು ನೀಡಿದರು ನ್ಯಾಯ ಸಮ್ಮತವಾಗಿ ಅರಣ್ಯ ಇಲಾಖೆ ವರ್ತಿಸುತ್ತಿಲ್ಲ ಎಂದು ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.