Saturday, July 25, 2026
Homeಜಿಲ್ಲೆಮಂಗಳೂರು : ಜೆಪ್ಪಿನ ಮೊಗರು ರಾಷ್ಟ್ರಿಯ ಹೆದ್ದಾರಿಯಲ್ಲಿ ಸರಣಿ ಅಪಘಾತ,ಅಪ್ಪಚ್ಚಿಯಾದ ಕಾರು.

ಮಂಗಳೂರು : ಜೆಪ್ಪಿನ ಮೊಗರು ರಾಷ್ಟ್ರಿಯ ಹೆದ್ದಾರಿಯಲ್ಲಿ ಸರಣಿ ಅಪಘಾತ,ಅಪ್ಪಚ್ಚಿಯಾದ ಕಾರು.

ಮಂಗಳೂರು : ಜೆಪ್ಪಿನ ಮೊಗರು ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆದ ಸರಣಿ ಅಪಘಾತದಲ್ಲಿ ವ್ಯಾಗನರ್ ಕಾರೊಂದು ಅಪ್ಪಚ್ಚಿಯಾದ ಘಟನೆ ರಾಷ್ಟ್ರೀಯ 66ರ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲೇ ಸಂಭವಿಸಿದೆ.

ಕಾರು ಚಾಲಕ ನಿವೃತ ಸೈನ್ಯಾಧಿಕಾರಿ ದಿನೇಶ್ ಎಂದು ತಿಳಿದುಬಂದಿದೆ ,ಇವರು ತೊಕ್ಕೊಟ್ಟಿನಿಂದ MCF ಗೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ.ಇದರಿಂದಾಗಿ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿ ಹಿಂಭಾಗದಲ್ಲಿದ್ದ ವ್ಯಾಗನಾರ್ ಕಾರಿನ ಹಿಂಭಾಗಕ್ಕೆ ಕೇರಳ ಸಾರಿಗೆ ಸಂಸ್ಥೆಯ ಬಸ್ ಢಿಕ್ಕಿ ಹೊಡೆದಿದೆ ,ಡಿಕ್ಕಿಯ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಗೆ ಮೈ ಜುಮ್ಮೆನಿಸಿದೆ.

ಕಾರು ಚಾಲಕ ದಿನೇಶ್ ಅವರಿಗೆ ಕಾಲು ಹಾಗು ತಲೆಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಆಸತ್ರೆಗೆ ದಾಖಲಿಸಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular