ಯಾದಗಿರಿ ; ಕಾರು ಮತ್ತು ಖಾಸಗಿ ಬಸ್ ಮದ್ಯ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಜೀವ ದಹನವಾದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ನಡೆದಿದೆ.

ಮೃತರನ್ನು ರಾಯಚೂರು ಮೂಲದ ಕೃಷ್ಣ ನಾಯಕ್, (52) ವರ್ಷ, ಪತ್ನಿ ಅನಂತ ಕಲಾ (45) ಶರಣಪ್ಪ, 36 ನಿಸರ್ಗ ಶರಣಪ್ಪ, (3೦) ಸಿದ್ಧಾರ್ಥ ಶರಣಪ್ಪ, (3) ಅದ್ವಿಕಾ ಶರಣಪ್ಪ, (5) ಶ್ರೀನಿಧಿ ಶರಣಪ್ಪ, (1.5) ವರ್ಷ ಶಶಿಕಲಾ, (30) ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.ಎಂದು ತಿಳಿದುಬಂದಿದೆ.
ಅಮವಾಸ್ಯೆ ಹಿನ್ನಲೆ ಸುರಪುರಿನ ವೇಣುಗೋಪಾಲ ದೇವಸ್ಥಾನ ಹಾಗೂ ತಿಂಥಣಿ ಮೌನೇಶ್ವರ ದೇಶ್ವರ ದರ್ಶನ ಪಡೆದು ಮರಳಿ ಹೋಗುವಾಗ ಘಟನೆ ಸಂಭವಿಸಿದೆ.ಸುರಪುರ ದಿಂದ ರಾಯಚೂರಿನ ಸಿರವಾರ ಪಟ್ಟಣಕ್ಕೆ ಹೋಗುವಾಗ ಯಾದಗಿರಿ ಜಿಲ್ಲೆಯ ಬೀದರ್- ಶ್ರೀರಂಗ ಪಟ್ಟಣ ರಾಜ್ಯ ಹೆದ್ದಾರಿಯ ಸುರಪುರ ತಾಲೂಕಿನ ಶಾಂತಪೂರ ಕ್ರಾಸ್ ಬಳಿ ನಡೆದ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲೆಗೆ ಕಾರಿನಲ್ಲಿದ್ದವರು ಸೇರಿ ೨ ಮಕ್ಕಳು ಸಜೀವ ದಹನವಾಗಿದ್ದಾರೆ. ಬಸ್ ನಲ್ಲಿದ್ದ 20 ಜನ ಪ್ರಯಾಣಿಕರು ಸುರಕ್ಷೀತವಾಗಿದ್ದಾರೆಂದು ಪೋಲಿಸರು ತಿಳಿಸಿದ್ದಾರೆ.


