ಮುಂಬೈ : ಮಹಾರಾಷ್ತ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಶಿವಸೇನೆಯ ಏಕನಾಥ ಶಿಂದೆ ಬಣದ ಶಾಸಕರ ಪಕ್ಷಾಂತರ ಪ್ರಕರಣದ ಬಗ್ಗೆ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಸುಪ್ರೀಂ ಕೋರ್ಟ್ ಎಚ್ಚರಿಕೆಗೆ ಮಣಿದು ಕೊನೆಗೂ ತಮ್ಮ ತೀರ್ಪು ಪ್ರಕಟಿಸಿದ್ದಾರೆ.
ಸಿಎಂ ಶಿಂದೆ ಬಣವೇ ನಿಜವಾದ ಶಿವಸೇನೆ ಎಂದು ಅವರು ಬುಧವಾರ ತೀರ್ಪು ನೀಡಿದ್ದಾರೆ. ಈ ಬೆಳವಣಿಗೆ ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಗಾಗಿ ಠಾಕ್ರೆ ಬಣ ಸಜ್ಜಾಗುತ್ತಿದ್ದಂತೇ ಅದಕ್ಕೆ ಆಘಾತ ನೀಡುವ ತೀರ್ಪನ್ನು ಸ್ಪೀಕರ್ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಠಾಕ್ರೆ ಮತ್ತು ಶಿಂದೆ ಬಣಗಳಿಂದ ಪರ-ವಿರೋಧದ ಹೇಳಿಕೆಗಳು ಹೊರಬಿದ್ದಿವೆ.
ಪ್ರಕರಣದ ಹಿನ್ನೆಲೆ: 2022 ರ ಜೂನ್‌ನಲ್ಲಿ ಏಕನಾಥ ಶಿಂದೆ ಬಣ ಅಂದಿನ ಸಿಎA ಉದ್ಧವ್ ಠಾಕ್ರೆವಿರುದ್ಧ ಬಂಡಾಯವೆದ್ದು, ಪಕ್ಷದ 56 ಶಾಸಕರ ಪೈಕಿ 40 ಮಂದಿಯೊAದಿಗೆ ಎನ್‌ಸಿಪಿ ಬಂಡಾಯ ನಾಯಕ ಅಜಿತ್ ಪವಾರ್ ಜೊತೆಗೂಡಿ ಬಿಜೆಪಿ ಮೈತ್ರಿಮಾಡಿಕೊಂಡರು. ದಿಢೀರನೇ ಎದುರಾದ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಮಹಾರಾಷ್ಟç ವಿಕಾಸ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡು ಸಿಎಂ ಠಾಕ್ರೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ನಂತರ ಬಿಜೆಪಿ ಬೆಂಬಲದಿAದ ಶಿಂದೆ ಬಣ ಅಧಿಕಾರಕ್ಕೆ ಬಂದಿತ್ತು.
ಬAಡಾಯ ಶಾಸಕರ ವಿರುದ್ಧ ಸ್ಪೀಕರ್ ರಾಹುಲ್ ನಾರ್ವೇಕರ್‌ಗೆ ದೂರು ಸಲ್ಲಿಸಿದ ಠಾಕ್ರೆ ಬಣ, ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿತ್ತು. ಆದರೆ ಈ ಬಗ್ಗೆ ಸ್ಪೀಕರ್ ತಮ್ಮ ತೀರ್ಪು ಪ್ರಕಟಿಸುವುದನ್ನು ವಿಳಂಬಮಾಡಿದ್ದರು. ಈ ಬಗ್ಗೆ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಸಾಲದ್ದಕ್ಕೆ 2023 ರ ಫೆಬ್ರವರಿಯಲ್ಲಿ ಚುನಾವಣಾ ಆಯೋಗವೂ ಶಿಂದೆ ಬಣವೇ ನಿಜವಾದ ಶಿವಸೇನೆ ಎಂದು ನಿರ್ಧರಿಸಿ ಪಕ್ಷದ ಬಿಲ್ಲು-ಬಾಣ ಚಿಹ್ನೆಯನ್ನು ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತನ್ನ ಆದೇಶ ಪ್ರಕಟಿಸಿ, 2024ರ ಜ.10 ರೊಳಗೆ ಠಾಕ್ರೆ ಬಣದ ಅರ್ಜಿಗಳ ಬಗ್ಗೆ ತೀರ್ಪು ಪ್ರಕಟಿಸಬೇಕೆಂದು ಕಟ್ಟಪ್ಪಣೆ ಮಾಡಿತ್ತು. ಅದರಂತೆ ಬುಧವಾರ ತಮ್ಮ ತೀರ್ಪು ಪ್ರಕಟಿಸಿದ ರಾಹುಲ್ ನಾರ್ವೇಕರ್, ಶಿಂದೆ ನೇತೃತ್ವದ ಬಣವೇ ನೈಜ ಶಿವಸೇನೆ ಎಂದು ದಾಖಲೆಗಳನ್ನು ಆಧರಿಸಿ ನಿರ್ಧರಿಸಿರುವುದಾಗಿ ಸ್ಪಷ್ಟಪಡಿಸಿದರು.