ಮುಂಬೈ : ಮುಂಬುರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಕ್ರಿಕೆಟ್ ತಂಡದ ಜವಾಬ್ದಾರಿ ಭರವಸೆಯ ಆಟಗಾರ ಶುಭ್‌ಮನ್ ಪಾಲಾಗಿದೆ. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ತಂಡದ ೩೭ನೇ ನಾಯಕನಾಗಿ ನೇಮಕಗೊಂಡಿದ್ದಾರೆ.
ಭಾರತ ಟೆಸ್ಸ್ ತಂಡ ಮುನ್ನೆಡೆಸುತ್ತಿದ್ದ ನಾಯಕ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಮಾಜಿ ನಾಯಕ ವಿರಾಟ್ ಕೋಹ್ಲಿ ಕೂಡ ನಿವೃತ್ತಿ ಘೋಷಿಸಿದ್ದರು. ಜೂನ್ ಮತ್ತು ಆಗಸ್ಟ್ ನಲ್ಲಿ ಇಂಗ್ಲೆAಡ್ ವಿರುದ್ದ ಭಾರತ ತಂಡ ೫ ಟೆಸ್ಟ್ ಪಂದ್ಯ ಆಡಲಿದೆ. ಈ ಹಿನ್ನೆಲೆಯಲ್ಲಿ ೧೬ ಮಂದಿಯ ಆಟಗಾರರ ಹೆಸರು ಪ್ರಕಟಿಸಿಲಾಗಿದೆ ಆಯ್ಕೆ ತಂಡದ ಮುಖ್ಯಸ್ಥ ಅಜಿತ್ ಅಗರ್ ಕರ್ ಸುದ್ದಿಗೋಷ್ಠಿಯಲ್ಲಿ ಶುಭ್ ಮನ್ ಗಿಲ್ ಅವರನ್ನು ನಾಯಕ ಹಾಗು ರಿಷಬ್ ಪಂತ್ ಅವರನ್ನು ಉಪನಾಯಕನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.
ಅನುಭವಿ ನಾಯಕರ ನಿವೃತ್ತಿಯಿಂದಾಗಿ ಮುAದಿನ ನಾಯಕ ಯಾರು ಎನ್ನುವ ಚಿಂತೆಗೆ ಮುಳುಗಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮAಡಳಿ ಶುಭ್ ಮನ್ ಗಿಲ್ ಅವರನ್ಮು ನೂತನ ನಾಯಕನಾಗಿ ಘೋಷಿಸಿದರು. ಇಂಗ್ಲೆAಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ತಂಡವನ್ನು ಘೋಷಿಸಿದ್ದು, ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದ ಹೊಸ ಟೆಸ್ಟ್ ನಾಯಕರನ್ನಾಗಿ ನೇಮಿಸಲಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅವರನ್ನು ಹೊಸ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಜಸ್ಪಿçÃತ್ ಬುಮ್ರಾ ನಾಯಕನಾಗುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಸೇರಿದ್ದಾರೆ. ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯ ನಂತರ ಭಾರತಕ್ಕೆ ಹೊಸ ಯುಗ ಪ್ರಾರಂಭವಾಗುವ ನಿರೀಕ್ಷೆಯಿದೆ.
ಇಂಗ್ಲೆAಡ್ ವಿರುದ್ಧ ಭಾರತೀಯ ತಂಡ ಶುಭಮನ್ ಗಿಲ್ (ನಾಯಕ),ರಿಷಭ್ ಪಂತ್ (ಉಪ ನಾಯಕ ಮತ್ತು ವಿಕೇಟ್ ಕೀಪರ್ ), ಉಳಿದಂತೆ ಯಶಸ್ವಿ ಜೈಸ್ವಾಲ್,ಕೆಎಲ್ ರಾಹುಲ್, ಬಿ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್,ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪಿçÃತ್ ಬುಮ್ರಾ, ಅಕ್ಶ್ದೀಪ್ ಸಿರಾಜ್, ಮೊಹಮ್ಮದ್ ಸಿರಾಜ್,ಕುಲದೀಪ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.