Tuesday, July 21, 2026
Homeಜಿಲ್ಲೆಮಂಗಳೂರು : ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ,ಕಾರು ಅಪ್ಪಚ್ಚಿ…!

ಮಂಗಳೂರು : ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ,ಕಾರು ಅಪ್ಪಚ್ಚಿ…!

ಮಂಗಳೂರು ; ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗೊಂಡ ಘಟನೆ ಕಡಬ ಸಮೀಪದ ನೂಜಿಬಾಳ್ಥಿಲ ಬಳಿ ನಡೆದಿದೆ.

ಕಾರು ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನ ಮೇಲೆ ಬೃಹತ್ ಗಾತ್ರದ ಮರ ಮುರಿದು ಬಿದ್ದಿದೆ. ಮರ ಬಿದ್ದ ಕಾರಣ ಕಾರಿನೊಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದು ಬಳಿಕ ಸ್ಥಳೀಯರು ಕಾರಿನೊಳಗಿನಿಂದ ಎಲ್ಲರನ್ನೂ ಹೊರತೆಗೆದು ರಕ್ಷಿಸಿದ್ದಾರೆ.

ಕಾರಿನಲ್ಲಿ ಚಾಲಕ, ಇಬ್ಬರು ಮಹಿಳೆಯರು ಮತ್ತು ಒಂದು ಮಗುವಿದ್ದು ಕಾರಲಿದ್ದವರಿಗೆ ಮೈ‌ ಕೈಗೆ ತೀವ್ರ ತರಹದ ಗಾಯಗಳಾಗಿವೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು ಸ್ಥಳಕ್ಕೆ ಸ್ಥಳೀಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular