ಮುಂಬೈ : 2024-25 ರ ರಣಜಿ ಟ್ರೋಫಿ ಋತುವಿನಲ್ಲಿ ವಿದರ್ಭ ವಿರುದ್ಧದ ಸೆಮಿಫೈನಲ್ ಹಣಾಹಣಿಗೂ ಮುನ್ನ ಮುಂಬೈ ಕ್ರಿಕೆಟ್ ತಂಡ ತೀವ್ರ ಹಿನ್ನಡೆ ಅನುಭವಿಸಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ಮತ್ತು ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಗಾಯದ ಕಾರಣದಿಂದಾಗಿ ತಂಡದಿAದ ಹೊರಗುಳಿದಿದ್ದಾರೆ. ವರದಿಯ ಪ್ರಕಾರ, ಜೈಸ್ವಾಲ್ ಎಡ ಪಾದದ ಗಾಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಗಾಯದಿಂದ ಚೇತರಿಸಿಕೊಳ್ಳಲು ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಬಹಿರಂಗಪಡಿಸಿವೆ.
ಬಿಸಿಸಿಐ ಜೈಸ್ವಾಲ್ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿAದ ಬಿಡುಗಡೆ ಮಾಡಿದ ನಂತರ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅವರನ್ನು ವಿದರ್ಭ ವಿರುದ್ಧದ ಸೆಮಿಫೈನಲ್‌ಗೆ ಆಯ್ಕೆ ಮಾಡಿದೆ. ಈ ಮಧ್ಯೆ, ಜೈಸ್ವಾಲ್ ಗಾಯದ ಕಾರಣ ತಂಡದಿAದ ಹಿಂದೆ ಸರಿದಿದ್ದಾರೆ. ಇದೀಗ, ಜೈಸ್ವಾಲ್ ಚಾಂಪಿಯನ್ಸ್ ಟ್ರೋಫಿಗೆ ಸ್ಟಾಂಡ್ ಬೈ ಪಟ್ಟಿಯಲ್ಲಿದ್ದಾರೆ.
ಈಗ ಬಿಸಿಸಿಐ ಅವರ ಬದಲಿಗೆ ಮತ್ತೊಬ್ಬ ಕ್ರಿಕೆಟಿಗನನ್ನು ನೇಮಿಸಲಿದೆ. ಆದರೆ, ಜೈಸ್ವಾಲ್ ಗಾಯದ ತೀವ್ರತೆಯ ಬಗ್ಗೆ ಬಿಸಿಸಿಐನಿಂದ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಮುಂಬೈ ಮತ್ತು ವಿದರ್ಭ ನಡುವಿನ ಸೆಮಿಫೈನಲ್ ಪಂದ್ಯ ಸೋಮವಾರ ನಾಗುರದಲ್ಲಿಅಂತ್ಯವಾಗಲಿದೆ ಯಶಸ್ವಿ ಹೊರಗುಳಿದ ನಂತರ, ಆಯುಷ್ ಮಾತ್ರೆ ಮತ್ತು ಆಕಾಶ್ ಆನಂದ್ ಮುAಬೈ ಇನ್ನಿಂಗ್ಸ್ ಅನ್ನುಆರಂಭಿಸಲಿದ್ದಾರೆ.
ಅಭ್ಯಾಸದ ಸಮಯದಲ್ಲಿ ಪಾದದ ನೋವು ಕಾಣಿಸಿಕೊಂಡಿದೆ ಎಂದು ಜೈಸ್ವಾಲ್ ತಂಡದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.