ಮಾಗಡಿ : ಗುರುವಾರ ಬೆಳಗ್ಗೆ ಟಿಎನ್ ಪಾಳ್ಯ ಗ್ರಾಮದ ಬಳಿಯ ಕೆರೆಯ ಬಳಿ ಶೌಚಾಲಯಕ್ಕೆ ತೆರಳಿದ ವೇಳೆ ವ್ಯಕ್ತಿಯ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿ ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ.
ತಾಲೂಕಿನ ಟಿಎನ್ ಪಾಳ್ಯ ಗ್ರಾಮದ ಮಹೇಂದ್ರ (45) ಕರಡಿ ದಾಳಿಯಿಂದ ತೀವ್ರಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ . ತಲೆ ಭಾಗವನ್ನು ಕರಡಿ ತೀವ್ರ ಗಾಯಗೊಳಿಸುತ್ತಿದ್ದ ವೇಳೆ ಮಹೇಂದ್ರ ಕಿರುಚಾಡುತ್ತಿದನ್ನು ಕಂಡ ಸ್ಥಳಿಯರು ಬಂದು ಕೂಗಾಡಿದ ವೇಳೆ ಕರಡಿ ಸ್ಥಳದಿಂದ ಕಾಲ್ಕಿತಿದೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಅಗಿದೆ.
ಸ್ಥಳಿಯರು ಕೂಡಲೇ ಕರಡಿಯಿಂದ ಗಾಯಗೊಂಡ ಮಹೇಂದ್ರ ರನ್ನು ತುಮಕೂರು ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಘಟನೆ ತಿಳಿದ ವಲಯ ಅರಣ್ಯಾದಿಕಾರಿ ಚೈತ್ರ ಆಸ್ಪತ್ರೆಗೆ ತೆರಳಿ ಅರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ. ಮಹೇಂದ್ರರವರು ಮನೆಗೆ ಆಧಾರವಾಗಿದ್ದು ಕಡುಬಡವನಾಗಿದ್ದಾರೆ ಕರಡಿದಾಳಿಯಿಂದ ತೀವ್ರ ಗಾಯಗೊಂಡಿರುವುದರಿಂದ ಕುಟುಂಬ ಸಂಕಷ್ಟದಲ್ಲಿದ್ದು ಅರಣ್ಯ ಇಲಾಖೆ ತುರ್ತಾಗಿ ಪರಿಹಾರ ಮತ್ತು ಸೂಕ್ತ ಚಿಕಿತ್ಸೆ ಕೊಡಿಸುವಂತೆ ಟಿಎಪಿಸಿಎಂಎಸ್ ನಿರ್ದೆಶಕ ಹೊನ್ನಾಪುರ ಶಿವಪ್ರಸಾದ್ ಒತ್ತಾಯಿಸಿದ್ದಾರೆ.
ಟಿಎನ್ ಪಾಳ್ಯ ಸುತ್ತಮುತ್ತ ಕಾಡುಪ್ರಾಣಿಗಳಾದ ಚಿರತೆ, ಕರಡಿಗಳು ಇದ್ದು ಸ್ಥಳೀಯ ನಿವಾಸಿಗಳ ಮೇಲೆ ನಿರಂತರ ಧಾಳಿ ಮಾಡುವುದರಿಂದ ರೈತರು ಜನನ ಹೊಲ,ಗದ್ದೆಗಳ ಬಳಿ ಸಾಕು ಪ್ರಾಣಿಗಳನ್ನು ಮೇಯಿಸಲು ತೆರಳಲು ಭಯಬೀತಿಗೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಭಯಬೀತಿಗೊಂಡಿರುವುದರಿಂದ ಅರಣ್ಯ ಇಲಾಖೆ ಕೂಡಲೇ ಕರಡಿ ಸೆರೆಹಿಡಿಯಲು ಕ್ರಮಕೈಗೊಳ್ಳುವಂತೆ ಸ್ಥಳಿಯರು ಮನವಿ ಮಾಡಿದ್ದಾರೆ.
ಕರಡಿ ಪ್ರತ್ಯಕ್ಷವಾಗಿ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಸುತ್ತಮುತ್ತ ಗ್ರಾಮಗಳ ಜನರಿಗೆ ಅರಿವು ಮೂಡಿಸಲಾಗಿದೆ ಈ ಸಂಭಂದ ಈಗಾಗಲೇ ಬೋನ್ ಇಟ್ಟು ಕರಡಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ. ಚೈತ್ರ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.