ಮಾಗಡಿ : ಈಜಾಡಲು ತೆರಳಿದ ಪೋಲಿಸ್ ನೀರುಪಾಲಾದ ಘಟನೆ ಕುದೂರು ಪೋಲೀಸ್ ಠಾಣೆ ವ್ಯಾಪ್ತಿಯಯ ನಡೆದಿದೆ.ತಾಲೋಕಿನ ಹೇಮಾಪುರ ಗ್ರಾಮದ ಸಿಆರ್ ಪೋಲಿಸ್ ದೇವರಾಜು (42) ಬಾವಿಯಲ್ಲಿ ಮುಳುಗಿ ಮೃತಪಟ್ಟ ದುರ್ದೌವಿಯಾಗಿದ್ದು. ನೆಲಮಂಗಲ ಪಟ್ಟಣದ ವಾಸ ವಾಗಿದ್ದ ದೇವರಾಜು ಬೆಂಗಳೂರಿನ ಸಿಆರ್ ಪೋಲೀಸ್ ಹಾಗಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ತವರೂರು ಹೇಮಾಪುರ ಗ್ರಾಮಕ್ಕೆ ಸ್ನೇಹಿತರೊಂದಿಗೆ ಬಂದು ತಳವರ ಪಾಳ್ಯದ ಸಂಭದಿಕರ ಬಾವಿಯಲ್ಲಿ ಸ್ನೇಹಿತರೊಂದಿಗೆ ತೆರಳಿ ಬಾವಿಯಲ್ಲಿ ಈಜಾಡುತ್ತಿದ್ದ ವೇಳೆ ಮುಳುಗಿ ಸಾವನ್ನಪಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೇಟಿ ನೀಡಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪುತ್ರ ಇತ್ತಿಚೆಗೆ ಮೃತಪಟ್ಟಿದ್ದು ಇದರಿಂದ ಮಾನಸಿಕ ಕಿನ್ನತೆಗೆ ಒಳಗಾಗಿ ಮದ್ಯಪಾನ ಸೇವನೆ ಹೆಚ್ಚು ಮಾಡಿಕೊಂಡಿದ್ದರು ಎನ್ನಲಾಗಿದೆ.
ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


