Thursday, July 23, 2026
Homeರಾಜ್ಯಮಡಿಕೇರಿ : ಚೇಲಾವರ ಫಾಲ್ಸ್ ನಲ್ಲಿ ಯುವಕ ನೀರುಪಾಲು.

ಮಡಿಕೇರಿ : ಚೇಲಾವರ ಫಾಲ್ಸ್ ನಲ್ಲಿ ಯುವಕ ನೀರುಪಾಲು.

ಮಡಿಕೇರಿ : ಜಲಪಾತದಲ್ಲಿ ಈಜಲೆಂದು ನೀರಿಗಿಳಿದ ಪ್ರವಾಸಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಮುಳಗಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇಲಾವರ ಜಲಪಾತದಲ್ಲಿ ಸಂಭವಿಸಿದೆ.

ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಮಟ್ಟನೂರಿನಿಂದ ಕೊಡಗು ಪ್ರವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭ ಯುವಕ ಈಜಲೆಂದು ನೀರಿಗಿಳಿದಿದ್ದಾನೆ . ಮೃತಪಟ್ಟ ಯುವಕ ಕೇರಳದ ಮಟ್ಟನ್ನೂರು ನಿವಾಸಿ ಮಹಮ್ಮದ್ ಅಶ್ರಫ್ ಎಂಬುವರ ಪುತ್ರ ರಶೀದ್( 25) ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಜಲಪಾತದಿಂದ ಮೃತದೇಹವನ್ನು ಮೇಲೆತ್ತಿದ್ದು ನಾಪೋಕ್ಲು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೀಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular