Monday, July 20, 2026
Homeಜಿಲ್ಲೆಮಂಗಳೂರು : ಹಿಂದೂ ಮುಖಂಡರು ಶರಣ್ ಪಂಪ್ ವೆಲ್,ಭರತ್ ಕುಂಮ್ಡೆಲ್ ಬಳಿಕ ಬಶೀರ್ ಕೊಲೆ ಆರೋಪಿಗೆ...

ಮಂಗಳೂರು : ಹಿಂದೂ ಮುಖಂಡರು ಶರಣ್ ಪಂಪ್ ವೆಲ್,ಭರತ್ ಕುಂಮ್ಡೆಲ್ ಬಳಿಕ ಬಶೀರ್ ಕೊಲೆ ಆರೋಪಿಗೆ Killers_target’ ಪೆಜ್ ನಿಂದ ಮತ್ತೆ ಮತ್ತೆ ಕೊಲೆ ಬೆದರಿಕೆ,ಮೌನಕ್ಕೆ ಶರಣಾದ ಪೋಲಿಸ್ ಇಲಾಖೆ…!

ಮಂಗಳೂರು : ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ 2018 ರ ಜನವರಿಯಲ್ಲಿ ಬಷೀರ್ ಹತ್ಯೆ ನಡೆದಿತ್ತು ಇದೀಗ ಬಶೀರ್ ಕೊಲೆ ಆರೋಪಿಗೆ ಮತ್ತೆ ಮತ್ತೆ ಕೊಲೆ ಬೆದರಿಕೆ ಬರುತ್ತಿರುವ ಮಾಹಿತಿ ದೊರೆತಿದೆ.

ಪ್ರಕರಣದ ಆರೋಪಿ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜಿತ್ ಅಲಿಯಾಸ್ ಶ್ರೀಜು ಎಂಬವರಿಗೆ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಶ್ರೀಜು ನೆಕ್ಸ್ಟ್ ಟಾರ್ಗೆಟ್ ಅಂತಾ ಪೋಸ್ಟ್ ಮಾಡಲಾಗಿತ್ತು. ‘Killers_target’ ಪೇಜ್ ನಿಂದ ಪೋಸ್ಟ್ ಆಗಿತ್ತು.

ಆದರೆ ಇಂದು ಮತ್ತೆ ಕಿಡಿಗೇಡಿಗಳು Abu_Sifiyan678 ” ಪೇಜ್ ಬೆದರಿಕೆ ಹಾಕಿ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದಾರೆ. ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತಾ ಮೆಸೇಜ್ ಹಾಕಿದ್ದು ಮಲಯಾಳಂ ನಲ್ಲಿ ಮೆಸೇಜ್ ಮಾಡಿದ್ದಾರೆ. ಒಟ್ಟಿನಲ್ಲಿ ಪೋಲಿಸ್ ಇಲಾಖೆ,ಗುಪ್ತಚರ ಇಲಾಖೆ ಮಾಹಿತಿ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಹಿಂದೂ ಸಂಘಟನೆಯ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular