Sunday, July 19, 2026
Homeಜಿಲ್ಲೆಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರೇ ಕೊಲೆಗಡುಕರು,ಅವರ ಮೇಲೆ ನೂಲಿನಷ್ಟು ನಂಬಿಕೆ ಇಲ್ಲ,NIAತನಿಖೆ...

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರೇ ಕೊಲೆಗಡುಕರು,ಅವರ ಮೇಲೆ ನೂಲಿನಷ್ಟು ನಂಬಿಕೆ ಇಲ್ಲ,NIAತನಿಖೆ ನಡೆಯಲಿ : ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್..!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬೇಲಿಯೇ ಹೊಲ ಮೇಯಿದಂಗೆ ಪೊಲೀಸರೇ ಕೊಲೆಗಡುಕರು ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಇದೊಂದು ವ್ಯವಸ್ಥಿತ ಸಂಚು,ಪೋಲಿಸರು ಹಾಗೂ ಕೊಲೆಗಾರರ ಒಡಂಬಡಿಕೆ,ಈ ಕೋಲೆಯಲ್ಲಿ ನೆರವಾಗಿ ಪೋಲಿಸರು ಭಾಗಿ, ಸುಹಾಸ್ ಶೆಟ್ಟಿ ಕಾರು ಸೆರ್ವಿಸ್ ಗೆ ಇಟ್ಟಿದ್ದ ಸಮಯದಲ್ಲೂ ಕೊಲೆಗಡುಕರು ಸರ್ವಿಸ್ ಸ್ಟೇಷನ್ ಗೆ ಬಂದು ಕಾರನ್ನು ನೋಡಿಕೊಂಡು ಹೋಗಿದ್ದಾರೆ ಇದನ್ನು ಪೊಲೀಸರು ತನಿಖೆ ಮಾಡಿದ್ದಾರಾ. ಇವರು ಯಾರ್ಯಾರನ್ನು ಫಿಕ್ಸ್ ಮಾಡಿದ್ದಾರೆ,ಅಪರಾಧಿಗಳ ಫೋಟೋ ಗಳನ್ನೂ ಸಮೇತ ನೀಡುದಿಲ್ಲವೆಂದರೆ ಈ ಪ್ರಕರಣದಲ್ಲಿ ಎಷ್ಟೊಂದು ಹಣ ಪಡೆದಿರಬಹುದು ಎಂದು ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ್ ಕೋಟ್ಯಾನ್ ಗಂಭೀರವಾಗಿ ಆರೋಪಿಸಿದ್ದಾರೆ.

ಹಿಂದೂಗಳ ಮನೆಗೆ ೨ ೩ ಗಂಟೆಗೆ ನುಗ್ಗಿ ತಪಾಸಣೆ ಮಾಡುತ್ತಾರೆ ಇವರಿಗೆ ಬಜ್ಪೆ ಬಳಿಯ ಲೊಕೊರಿಸ್ ಎಂಬ ಪ್ಲಾಟ್ ಗೆ ನುಗ್ಗುತ್ತಾರೆ? ಅಲ್ಲಿ ಇರುವುದೇ ದೇಶದ್ರೋಹಿಗಳು,ಜಿಲ್ಲೆಯಲ್ಲಿ ನಡೆದ ಎಲ್ಲಾ ಹತ್ಯೆಗೆ ಸಂಬಂದಿಸಿದ ಆರೋಪಿಗಳು ಆ ಫ್ಲಾಟ್ ನಲ್ಲಿ ರಾಜರೋಷವಾಗಿದ್ದಾರೆ. ಇದಕ್ಕೆ ಮೂಲ ಕಾರಣ ಪೊಲೀಸ್ ವೈಫಲ್ಯ .ಪೋಲಿಸರು ಕೊಲೆಗಡುಕರು ಸೇರಿ ಕೊಲೆ ನಡೆದಿದೆ.ಅರೋಪಿಗಳೆ ಖುದ್ದು ಬಂದು ಸರಂಡರ್ ಆಗಿದ್ದಾರೆ ,ದುಬೈಯಿಂದ ಕೋಟಿ ಗಟ್ಟಲೆ ಹಣ ಬಂದಿದೆ.ಪೋಲಿಸರ ಸಂಪೂರ್ಣ ಬೆಂಬಲ,ಇಲಾಖೆ ನೇರ ಭಾಗಿ ಎಂದರು.

ಮಂಗಳೂರಿಗೆ ಇಷ್ಟರ ವರೆಗೆ ಪೋಲಿಸ್ ಕಮಿಷನರ್ ಬಂದದರಲ್ಲಿ ಇಂತಹ ಭ್ರಷ್ಟ ಕಮಿಷನರ್ ನೊಡಲೆ ಇಲ್ಲ, ಪೋಲಿಸರಿಗೆ ಬಗ್ಗು ಬಡಿಯಲು ಕಾಂಗ್ರೆಸ್ ಸರಕಾರ ಬೆಂಬಲ,ಗೃಹ ಸಚಿವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೃತ ಪಟ್ಟ ಹಿಂದೂಗಳ ಮನೆಗೆ ಹೋದರೆ ಜಾಗ್ರತೆ ಎಂದು ಮುಸ್ಲಿಮರು ಹೇಳುತ್ತಾರೆ.ಈ ಸರಕಾರಕ್ಕೆ ನಾಚಿಕೆ ಯಾಗಬೇಕು.

ರಾಜ್ಯದಲ್ಲಿ ತುರ್ತುಪರಿಸ್ಥಿತಿ ಇದೆಯಾ…ಇದರ ಹಿಂದೆ ಕೋಟಿಗಟ್ಡಲೆ ಹಣ ಬಂದಿದೆ.ಸುಹಾಸ್ ಶೆಟ್ಟಿ ರೌಡಿಶೀಟರ್ ಆದರೆ ಅವನ ತಂದೆ ತಾಯಿ ರೌಡಿ ಶೀಟರ? ಹಿಂದೂಗಳಲ್ಲಿ ಮಾತ್ರ ರೌಡಿಶೀಟರ್ ಇರುವುದ..? ಸ್ಪೀಕರ್ ಗೆ ರಾಜಕೀಯ ಇದೆಯಾ ಒಂದು ಕುಟುಂಬದ ಪರವಾಗಿ ಸ್ಪೀಕರ್ ಯು.ಟಿ ಖದರ್ ಮಾತನಾಡಿ ತನ್ನ ನಿಜ ಬಣ್ಣವನ್ನು ಬಯಲುಮಾಡಿದ್ದಾರೆ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಆಕ್ರೋಶ ಹೊರಹಾಕಿದ್ದಾರೆ.

ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ ಈ ಪ್ರಕರಣದಲ್ಲಿ ಮೂಡಬಿದರೆ ಪ್ರಶಾಂತ್ ಪೂಜಾರಿ ಹತ್ಯೆ ಮಾಡಿದ ಹಂತುಕರು ಬಾಗಿ ಆಗಿದ್ದರೆಂದು ಬಲ್ಲಾ ಮೂಲಗಳಿಂದ ಮಾಹಿತಿ ದೊರೆತಿದೆ.

ಮುಸ್ತಾಫಾ,ಅನ್ವರ್ ,ಕಬೀರ್ ಪೊಲೀಸ್ ಪಿ.ಸಿ .ಆರ್ ವಾಹನಕ್ಕೆ ಪ್ರಶಾಂತ್ ಪೂಜಾರಿ ಯಾ ಮೃತದೇಹವನ್ನು ರವಾನಿಸಿ ನಾಟಕ ವಾಡಿದ ದುಸ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರೆಂದು ತಿಳಿದಿದೆ . ಚೊಟ್ಟೆ ನೌಶಾದ್ ಎಂಬವನು ಕಾಲಾವರ್ ಅಲ್ಲಿ ಮರಳು ವ್ಯವಹಾರದ ವಿಚಾರದಲ್ಲಿ ಸುಹಾಸ್ ಜೊತೆ ವೈಮನಸು ಉಂಟಾದ ಕಾರಣ ಅವರು ಕೂಡ ಹಣದ ಹೊಳೆಯನ್ನು ಹರಿಸಿದ್ದಾರೆಂದು ಮಾಹಿತಿ ತಿಳಿದಿದೆ.

ಆದರೆ ಪೊಲೀಸ್ ಇಲಾಖೆಯ ವೈಫಲ್ಯದಿಂದ ಈ ಹತ್ಯೆ ನಡೆದಿದ್ದುಈ ಹತ್ಯೆ ಪ್ರಕರಣದಲ್ಲಿ ಕೇರಳದ ವ್ಯಕ್ತಿಗಳು ಬಾಗಿಯಾಗಿದ್ದರೆಂದು ಮಾಹಿತಿ ದೊರೆತಿದೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಸ್.ಡಿ .ಪಿ .ಐ ಯಾ ಮುಖಂಡರು ಬೀಡು ಬಿಟ್ಟಿದ್ದು ಯಾವುದೇ ಪ್ರಕರಣ ದಾಖಲಾದರು ಮುಖ್ಯವಾಗಿ ಈ ದುಸ್ಕರ್ಮಿಗಳು ರಶೀದ್ ಗೆ ಬೇಕಾಬಿಟ್ಟಿ ಹಣ ನೀಡಿ ಆತನ ಅನುಮತಿಯಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಜೊತೆ ಡೀಲ್ ಮಾಡುತ್ತಿದ್ದನೆಂದು ಮಾಹಿತಿ ದೊರೆತಿದೆ. ಒಟ್ಟಿನಲ್ಲಿ ಈ ಹತ್ಯೆಗೆ ಹಣ ಹೊಳೆ ಹರಿದಿದ್ದು ಪೊಲೀಸ್ ಇಲಾಖೆ ಹಾಗೂ ಇತರ ಸಂಘಟನೆ ಕೂಡ ಬಾಗಿಯಾಗಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular