Tuesday, October 21, 2025
Flats for sale
Homeಜಿಲ್ಲೆಮಂಗಳೂರು : ಸಮಾಜದಲ್ಲಿ ಬಹಳಷ್ಟು ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸುವುದು ನಮ್ಮ ಉದ್ದೇಶ, ಎಲ್ಲ ಸಮಾಜ...

ಮಂಗಳೂರು : ಸಮಾಜದಲ್ಲಿ ಬಹಳಷ್ಟು ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸುವುದು ನಮ್ಮ ಉದ್ದೇಶ, ಎಲ್ಲ ಸಮಾಜ ಒಗ್ಗಟ್ಟಾಗಿದ್ದಾಗ ಸಾಧನೆ ಸಾಧ್ಯವಾಗುತ್ತದೆ : ಮಾಜಿ ಸಚಿವ ಕೃಷ್ಣ.ಜೆ .ಪಾಲೆಮಾರ್ .

ಮಂಗಳೂರು : ರಾಮಕ್ಷತ್ರಿಯ ಸೇವಾ ಸಂಘ (ರಿ.) ಮಂಗಳೂರು ವತಿಯಿಂದ ನಡೆದ “ಅಭಿನಂದನಾ ಸಮಾರಂಭ” ಕಾರ್ಯಕ್ರಮ ಇಂದು ನಗರದ ಮೋರ್ಗನ್ಸ್ ಗೇಟ್‌ನ ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಯೋಗಿಶ್ ಕುಮಾರ್ ಜೆಪ್ಪುರವರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ವೇದಿಕೆಯಲ್ಲಿರುವ ಗಣ್ಯರು ದೀಪಬೆಳಗಿಸುವುದರ ಮೂಲಕ ನೆರೆವೆರೆಸಿದರು‌.

ಸಮಾರಂಭದಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಮಠಾಧಿಶರನ್ನು ಪ್ರದೀಪ್ ಪಾಲೆಮಾರ್ ದಂಪತಿಗಳು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ವಹಿಸಿದರು ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ,ಶಾಸಕ ವೇದವ್ಯಾಸ್ ಕಾಮತ್, ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಶಾಂತರಾಮ ಶೆಟ್ಟಿ ಯವರು ವಹಿಸಿದರು .

ವೈದ್ಯಕೀಯ ವೃತ್ತಿಯಲ್ಲಿ25 ವರ್ಷ ಸೇವೆ ಸಲ್ಲಿಸಿದ ಪ್ರತಿಷ್ಟಿತ ರಾಜ್ಯ ಪ್ರಶಸ್ತಿ ಹಾಗೂ ಜಿಲ್ಲಾ ಪ್ರಶಸ್ತಿಯನ್ನು ಪಡೆದ ಹೃದ್ರೋಗ ತಜ್ಞ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ. ಡಾ. ಹೆಚ್. ಪ್ರಭಾಕರ್.ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ತಜ್ಞ ರಾದ ಡಾ. ಸದಾನಂದ ಪೂಜಾರಿ, ಡಾ. ಬಿ.ಸಿ.ರಾಯ್ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕೃತರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಹಾಗೂ ಅಂತಾರಾಷ್ಟ್ರೀಯ ವೈಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಕ್ರೀಡಾಪಟು ಕು. ನಾಗಶ್ರೀ ಗಣೇಶ ಶೇರುಗಾರ್ ರವರಿಗೆ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಮಂಗಳೂರು ದ.ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ರವರು ವೇದಿಕೆಯಲ್ಲಿರುವ ಸಮಾಜಕ್ಕೆ ಸೇವೆಗೈದ ಸಾಧಕರಿಗೆ ಶ್ಲಾಘಿಸಿದರು.ವೈದ್ಯರೆಂದರೆ ಸಮಾಜದಲ್ಲಿ ಮುಖ್ಯ ಪಾತ್ರ ವಹಿಸುವವರು ಆ ಅಪಾತ್ರದಿಂದ ಎದೆಸ್ಸ್ಟೋ ಅಮೂಲ್ಯ ಜೀವಗಳನ್ನು ಉಳಿಸುವುದರಲ್ಲಿ ಅವರ ಪಾತ್ರ ದೊಡ್ಡದು ಅವರ ಸಮಾಜಮುಖಿ ಕೆಲಸಕಾರ್ಯಗಳಿಂದ ಈ ಗಣ್ಯರು ತುಳುನಾಡಿಗೆ ಕೀರ್ತಿ ತರುವಂತಹ ಕಾರ್ಯಮಾಡಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಗೈಯಲಿ ಎಂದು ಆಶಿಸಿದರು.

ಬಳಿಕ ಮಾತನಾಡಿದ ಸುಬ್ರಹ್ಮಣ್ಯ ಮಠಾಧಿಶರು ಮಾತನಾಡಿ ಸಮಾಜ ಸೇವೆ ಮಾಡುವುದೆಂದರೆ ದೇವರವಸೇವೆ ಎಂದು ಅವರನ್ನು ಗುರುತಿಸುವುದು ಕೂಡ ಅದಕ್ಕಿಂತ ದೊಡ್ಡ ಸೇವೆ ಎಂದರು.ಮಾಜಿ ಸಚಿವರು ಹಾಗೂ ರಾಮಕ್ಷತ್ರಿಯ ಸೇವಾ ಸಂಘ (ರಿ.) ಇಂಥವರನ್ನು ಗುರುತಿಸಿ ಸನ್ಮಾನಿಸುವುದೇ ದೊಡ್ಡ ಕೀರ್ತಿ ಎಂದರು.ಈ ವೇಳೆ “ಅಭಿನಂದನಾ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರನ್ನು ಶ್ಲಾಘಿಸಿದರು ಇದರಂತೆಯೇ ಮುಂದಿನ ದಿನಗಳಲ್ಲಿ ಇವರುಗಳು ಇನ್ನಷ್ಟು ಸಾಧನೆಗಳಿಸಲಿ ಎಂದು ಹಾರೈಸಿದರು.

ಬಳಿಕ ಮಾತನಾಡಿದ ಖ್ಯಾತ ವೈದ್ಯ ಡಾ.ಶಾಂತರಾಮ್ ಶೆಟ್ಟಿಯವರು ಮಾಜಿ ಸಚಿವರಾದ ಕೃಷ್ಣ ಪಾಲೆಮಾರ್ ರವರು ಒಬ್ಬ ಕನಸುಗಾರರು ,ರಾಮಕ್ಷತ್ರಿಯ ಸಮದಾಯ ಒಂದು ಚಿಕ್ಕ ಸಮುದಾಯದಲ್ಲಿ ಹುಟ್ಟಿ ಬೆಳೆದು ಈ ನಾಡಿಗೆ ಏನು ಮಾಡಬೇಕೆಂದು ತೋರಿಸಿಕೊಟ್ಟವರು ಕೃಷ್ಣ ಪಾಲೆಮಾರ್ ರವರು ಎಂದರು.ಸರಕಾರಿ ಆಸ್ಪತ್ರೆಯಲ್ಲಿ ಹೇಗೆ ಸೇವೆ ಮಾಡಬಹುದೆಂದು ಸಮಾಜಕ್ಕೆ ತೋರಿಸಿಕೊಟ್ಟವರು ಡಾ.ಸದಾನಂದ ಪೂಜಾರಿಯವರುವೆಂದರು.ಈ ನಾಲ್ಕು ಪ್ರತಿಭೆಗಳನ್ನು ಗುರಿತಿಸಿ ಸನ್ಮಾನಿಸಿದಕ್ಕೆ ಕೃಷ್ಣ ಜೆ.ಪಾಲೆಮಾರ್ ಹಾಗೂ ರಾಮ ಕ್ಷತ್ರಿಯ ಸಂಘವನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಸಮಾಜದಲ್ಲಿ ಬಹಳಷ್ಟು ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸುವುದು ನಮ್ಮ ಉದ್ದೇಶ. ಎಲ್ಲ ಸಮಾಜ ಒಗ್ಗಟ್ಟಾಗಿದ್ದಾಗ ಸಾಧನೆ ಸಾಧ್ಯವಾಗುತ್ತದೆ. ವೈದ್ಯರ ಸೇವೆಯು ಇಂಡಿನ ಸಮಾಜಕ್ಕೆ ಅವರ ಕೊಡುಗೆಗಳು ಅತ್ಯಮೂಲ್ಯವಾದ್ದರಿಂದ ಅವರು ನಮ್ಮ ಜೀವನಕ್ಕೆ ಅತ್ಯಗತ್ಯವಾಗಿದ್ದಾರೆ. ಇಂದು ಹಲವು ಮಂದಿ ಸಾಧಕ ವೈದ್ಯರನ್ನು ಸಮ್ಮಾನಿಸಿದ್ದು, ರಾಮಕ್ಷತ್ರಿಯ ಸಮಾಜದಲ್ಲಿಯೂ ವೈದ್ಯರ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ರವೀಂದ್ರ ಕೆ,ಅಧ್ಯಕ್ಷ ಮುರಳಿ,ಕಾರ್ಯದರ್ಶಿ ರವೀಂದ್ರ, ಕೋಶಾಧಿಕಾರಿ ದಿನೇಶ್ ಕುಮಾರ್ ಬೇಕಲ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular