Saturday, November 28, 2026
Homeಜಿಲ್ಲೆಮಂಗಳೂರು : ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ ರಾಜಕೀಯ ದುರುದ್ದೇಶದ ನಡೆ : ಬಿ.ಕೆ. ಹರಿಪ್ರಸಾದ್ ಕಿಡಿ.

ಮಂಗಳೂರು : ಲೋಕಸಭಾ ಕ್ಷೇತ್ರ ಪುನರ್‌ವಿಂಗಡಣೆ ರಾಜಕೀಯ ದುರುದ್ದೇಶದ ನಡೆ : ಬಿ.ಕೆ. ಹರಿಪ್ರಸಾದ್ ಕಿಡಿ.

ಮಂಗಳೂರು : ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ರಾಜಕೀಯ ದುರುದ್ದೇಶದಿಂದ ಕೂಡಿದ ನಡೆ ಎಂದು ಆರೋಪಿಸಿರುವ ಅವರು, ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯ ಹಾಗೂ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

“ವೋಟ್ ಚೋರಿಯಿಂದ ಅಧಿಕಾರಕ್ಕೆ ಬಂದವರು ಈಗ ಪಾರ್ಟಿ ಚೋರಿ ಮಾಡುತ್ತಿದ್ದಾರೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಈ ಹಿಂದೆ ಇವಿಎಂಗಳನ್ನು ಬ್ರೇಕ್ ಮಾಡಿದರು, ಸತ್ತವರನ್ನು ಜೀವಂತ ಮಾಡಿದರು ಎಂಬ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ.

ಶಾಸಕರನ್ನು ಖರೀದಿಸಿದರು, ಪಕ್ಷಗಳನ್ನೇ ಖರೀದಿಸಿದರು ಎಂದು ಆರೋಪಿಸಿದ ಅವರು, ಬಿಜೆಪಿಯು ತನ್ನದೇ ಆದ ಸಂಖ್ಯಾಬಲವನ್ನು ಸೃಷ್ಟಿಸಿಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.

ಪ್ರಸ್ತುತ 540 ಸಂಸದರು ಇರುವ ಲೋಕಸಭೆಯಲ್ಲೇ ಹಲವು ಸಂಸದರು ಸರಿಯಾಗಿ ಹಾಜರಾಗುವುದಿಲ್ಲ. ಇನ್ನು ಸಂಸದರ ಸಂಖ್ಯೆ 850ಕ್ಕೆ ಏರಿಕೆಯಾದರೆ ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದರು.

ಕ್ಷೇತ್ರ ಪುನರ್‌ವಿಂಗಡಣೆಯ ಮೂಲಕ ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜನಸಾಮಾನ್ಯರ ಪರವಾಗಿ ಕಾಂಗ್ರೆಸ್‌ನ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಕೇಂದ್ರ ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ ಪ್ರಸ್ತಾವನೆ ಕುರಿತು ತಮ್ಮ ವಿರೋಧವನ್ನು ಈ ಮೂಲಕ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular