ಮಂಗಳೂರು : ರಾಹುಲ್ ಗಾಂಧಿಯವರು ಮೊಹಬ್ಬತ್ ಕಿ ದುಖಾನ್ ಅಂತ ಹೇಳಿದ್ರು ಆದ್ರೆ ಈಗ ರೈತರ ಆತ್ಮಹತ್ಯೆಯ ದುಖಾನ್ ಆಗಿ ಬದಲಾಗಿದೆ. ರಾಜ್ಯ ಸರಕಾರ ಮೂಡ ಹಗರಣ, ವಾಲ್ಮೀಕಿ ಹಗರಣದಲ್ಲಿ ಜನರ ಹಣವನ್ನು ಕಟಾಕಟ್ ಆಗಿ ಕಟ್ ಮಾಡಿ ನುಂಗಿ ನೀರು ಕುಡಿದಿದೆ ,ಈಶ್ವರಪ್ಪ ಪ್ರಕರಣದಲ್ಲಿ ರಾಜೀನಾಮೆ ಕೇಳಿದ್ದ ಕಾಂಗ್ರೆಸಿಗರು ಈಗ ಪ್ರಿಯಾಂಕ್ ಖರ್ಗೆ ಪ್ರಕರಣದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಗುತ್ತಿಗೆದಾರ ಸಾವನ್ನಪ್ಪಿದ್ದರೂ ಖರ್ಗೆ ರಾಜೀನಾಮೆ ಕೊಡುವುದಿಲ್ಲ. ಮೂಡ ಹಗರಣದಲ್ಲೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿಲ್ಲ ಹೀಗಾಗಿ ನಾವು ಅವರಿಂದ ರಾಜೀನಾಮೆ ನಿರೀಕ್ಷೆ ಮಾಡುವುದಿಲ್ಲ ಆದರೆ ನಮ್ಮ ಹೋರಾಟವನ್ನು ಮಾತ್ರ ಬಿಡುವುದಿಲ್ಲ,ಚಂದ್ರಶೇಖರ ಆತ್ಮಹತ್ಯೆಯ ಕಾರಣಕ್ಕೆ ವಾಲ್ಮೀಕಿ ಹಗರಣ ಬೆಳಕಿಗೆ ಬಂತು. ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಆತ್ಮಹತ್ಯೆ, ದಾವಣಗೆರೆಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಇವೆಲ್ಲ ಪ್ರೀತಿಯ ಅಂಗಡಿಯಲ್ಲಿ ನಡೆಯುತ್ತಿದೆ ಎಂದರು ರಾಜೀನಾಮೆ ಕೊಡುವುದಿಲ್ಲ ಬಟ್ಟೆ ಹರಿದುಕೊಳ್ಳಿ ಎಂದು ದುರಹಂಕಾರದಿಂದ ಹೇಳಿಕೆ ನೀಡಿರುವ ನಿಮಗೆ ಜನರೇ ತಕ್ಕ ಉತ್ತರ ಕೊಡಲಿದ್ದಾರೆ. ಹತ್ಯೆ, ಆತ್ಮಹತ್ಯೆಯೇ ಸರಕಾರದ ಹೆಗ್ಗುರುತು ಆಗಿದ್ದು ಈ ಸರಕಾರದಲ್ಲಿ ನ್ಯಾಯ ಸಿಗದಂತೆ ಎಲ್ಲರೂ ಕಣ್ಣು ಮುಚ್ಚಿ ಕುಳಿತ್ತಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ.
ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರವಿಕುಮಾರ್, ಯತೀಶ್ ಆಳ್ವ, ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.


