Friday, February 21, 2025
Flats for sale
Homeಜಿಲ್ಲೆಮಂಗಳೂರು ; ರಂಗಸ್ಥಳ ಮಂಗಳೂರು (ರಿ) ದಶಮಾನೋತ್ಸವದ ಪ್ರಯುಕ್ತ ಕದ್ರಿ ದೇವಳದ ರಾಜಾಂಗಣದಲ್ಲಿ ಚಂದ್ರಾವಳಿ- ರತ್ನಾವತಿ...

ಮಂಗಳೂರು ; ರಂಗಸ್ಥಳ ಮಂಗಳೂರು (ರಿ) ದಶಮಾನೋತ್ಸವದ ಪ್ರಯುಕ್ತ ಕದ್ರಿ ದೇವಳದ ರಾಜಾಂಗಣದಲ್ಲಿ ಚಂದ್ರಾವಳಿ- ರತ್ನಾವತಿ ಕಲ್ಯಾಣ ಅಖ್ಯಾನ ಪ್ರದರ್ಶನ.!

ಮಂಗಳೂರು ; ಕಳೆದ ಹತ್ತು ವರ್ಷಗಳ ಹಿಂದೆ ಸಮಾನ ಆಸಕ್ತದೊಂದಿಗೆ ನಮ್ಮ ನಾಡಿನ ಸಮಗ್ರ ಕಲೆಯಾದ ಯಕ್ಷಗಾನಕ್ಕೆ ಪ್ರೋತ್ಸಾಹ, ಭಾರತ ಭಾಗವತ ಇದರ ಸಾರ ಸಂದೇಶ ತಿರುಳು, ಹಾಗೂ ನಮ್ಮ ಧರ್ಮಗ್ರಂಥಗಳಾದ ರಾಮಾಯಣ, ಪ್ರಚುರ ಪಡಿಸುವರೇ ಯಕ್ಷಗಾನವೇ ಪಧಾನ ಮಾಧ್ಯಮ. ಯಕ್ಷಗಾನವೇ ಸರ್ವಕಾಲಿಕ ಸತ್ಯ. ಆದುದರಿಂದ ಯಕ್ಷಗಾನವನ್ನು ಪೋಷಿಸುವಸಲುವಾಗಿ ಹುಟ್ಟಿಕೊಂಡ ಸಂಸ್ಥೆ ರಂಗಸ್ಥಳ ಮಂಗಳೂರು ಎಂದು ತಿಳಿಸಿದ್ದಾರೆ. ಕೇವಲ ಸಮಾನ ಮನಸ್ಕ ಐದೇ ಐದು ಜನರಿಂದ ಪ್ರಾರಂಭಿಸಿದ ಈ ಸಂಸ್ಥೆ ಅಷ್ಟೇ ಮಂದಿ ಯೊಂದಿಗೆ ಮುನ್ನಡೆಸುತ್ತಾ ಇದೀಗ ದಶಮಾನೋತ್ಸವಕ್ಕೆ ಕಾಲಿಡುತ್ತಾ ಯಕ್ಷಾಭಿಮಾನಿಗಳೇ ರಂಗಸ್ಥಳದ ವಾರ್ಷಿಕ ಕಾರ್ಯಕ್ರಮ ಯಾವಾಗ ಎಂದು ಕೇಳುವಷ್ಟರ ಮಟ್ಟಿಗೆ ಜನಮನದ ಹೃದಯಾಂತರಾಳದಲ್ಲಿ ಬೇರೂರಿದೆ.

ಶ್ರೀಯುತ ಎಸ್.ಎಲ್ನಾಯ ಕ್ರಿಂದ ಸ್ಥಾಪಿತ ಹಾಗೂ ದಿನೇಶ್ ಇವರ ಸ್ಥಾಪಕಾಧ್ಯಕ್ಷತೆಯಲ್ಲಿ ಈ ಸಂಸ್ಥೆ ವರ್ಷಕ್ಕೆ ಒಂದು ಯಕ್ಷಗಾನ, ವರ್ಷಕ್ಕೆ ಒಂದು ತಾಳಮದ್ದಳೆ, ಯಕ್ಷ ಸಂಘಟನೆಗಳಿಗೆ ಆರ್ಥಿಕ ಸಹಾಯ ಯಕ್ಷಕಲಾವಿದರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ, ಕಲಾವಿದರಿಗೆ ವೈದ್ಯಕೀಯವೆಚ್ಚ ಸಹಾಯ, ಯತಾಶಕ್ತಿ ಮಾಡಿಕೊಂಡುಬರುತ್ತಿದೆ ಎಂದರು.

ರಂಗಸ್ಥಳ ಮಂಗಳೂರು ರಿ.ಯಕ್ಷಗಾನ ಕಾರ್ಯ ಕ್ಷೇತ್ರ ಪ್ರಧಾನವಾಗಿ ಮಂಗಳೂರೇ ಆಗಿದ್ದು ಪ್ರಥಮ ನಾಲ್ಕು ವರ್ಷ ಟೌನ್ಹಾಲ್ನಲ್ಲಿಯೂ ನಂತರ ನಿರಂತರ ಆರು ವರ್ಷಗಳಿಂದ ಶ್ರೀಕದ್ರಿ ದೇವಳ ದರಾಜಾಂಗಣದಲ್ಲಿ ಜರುಗುತ್ತಿದ್ದು ಬಡಗಿನ ಮೇಳಗಳ ಜತೆಗೆ ತೆಂಕಣದ ಕಲಾವಿದರನ್ನು ಸೇರಿಸಿ ಕೂಡಾಟ, ಆಡಿಸಿದ ಹೆಮ್ಮೆ ನಮ್ಮ ಸಂಸ್ಥೆಗೆ ಇದೆ ಎಂದು ತಿಳಿಸಿದರು.

ನಮ್ಮ ಸಂಸ್ಥೆಯು ಈಗಾಗಲೇ ಉಭಯತಿಟ್ಟುಗಳ ಹಿರಿಯಕಲಾವಿದರಿಗೆ ವಾರ್ಷಿಕವಾಗಿ ಮೂರು ಕಲಾವಿದರಿಗೆ ಸನ್ಮಾನಿಸುತ್ತಾ ಬಂದಿದ್ದು ಇದು ಇಂದಿನ ಯುವಕಲಾವಿದರಿಗೆ ಸ್ಪೂರ್ತಿ ತುಂಬಿಮುಂದಿನದಿನಗಳಲ್ಲಿ ಅವರನ್ನುಸನ್ಮಾನಿಸುವ ಪರಿಪಾಠನಮ್ಮ ಸಂಸ್ಥೆ ಹೊಂದಿದೆ ಎಂದರು .

ನಮ್ಮ ಸಂಸ್ಥೆಯು, ಬಳ್ಳೂರು ಕೃಷ್ಣಯಾಜಿ, ಗೋಡೆ ನಾರಾಯಣಹೆಗಡೆ, ಜಬ್ಬಾರ ಸಮೊ ಹಳ್ಳಾಡಿ, ಜಲವಳ್ಳಿ ವಿದ್ಯಾಧರ್,ನೀಲೋಡು, ಕಿಶನ್ , ಹಡಿನಬಾಳ, ಮನೆ, ಕೊಳಿಗೆ,ಜನ್ಸಾಲೆ,ಕೊಳಗಿ ಮುಂತಾದ ಕಲಾವಿದರಿಗೆ ಸನ್ಮಾನಿಸಿದೆ, ಅದೇರೀತಿ ತಾಳೆಮದ್ದಾಳೆ ಕಲಾವಿದರಾದ ಉಜಿರೆಅಶೋಕಭಟ್, ಹಿರಣ್ಯವೆಂಕಟೇಶಭಟ್, ಸರ್ಪಂಗಳಈಶ್ವರಭಟ್, ಎಂಕೆರಮೇಶಆಚಾರ್, ಪ್ರೊ. ಪವಸ್ಮರಣೆರೆ ಗಣೇಶಹೆಬ್ರಿ, ರಾಘವೇಂದ್ರಯಲ್ಲಾಪುರ, ಶಿವಾನಂದಕೋಟ ಮುಂತಾದವರಿಗೆ ಸನ್ಮಾನಿಸಿದ್ದು ಈ ವರ್ಷಪ್ರಸಿದ್ದ ಹಾಸ್ಯಗಾರರಾದ ರಮೇಶ ಭಂಡಾರಿ ಮೂರೂರು ಹಾಗೂ ಅಶೋಕ ಭಟ್ಟಿದ್ದಾಪುರ ಇವರಿಗೆ ಸನ್ಮಾನೇರ್ಪಡಲಿದೆ ಎಂದು ತಿಳಿಸಿದ್ದಾರೆ.

ದಶಮಾನೋತ್ಸವದ ಅಂಗವಾಗಿ ಈ ವರ್ಷ ಮೆಕ್ಕೆ ಕಟ್ಟು ಮೇಳದವರಿಂದ 25 ನೇ ಶನಿವಾರ ರಾತ್ರಿ 8 ರಿಂದ ಶ್ರೀಕದಿದೇವಳದರಾಜಾಂಗಣದಲ್ಲಿ ಚಂದ್ರಾವಳಿ ವಿಲಾಸ ರತ್ನಾವತಿ ಕಲ್ಯಾಣ ಎಂಬ ಅಖ್ಯಾನ ಜರುಗಲಿದೆ ಎಂದು ತಿಳಿಸಿದರು. ನಮ್ಮ ಸಂಘದ ವಿಶೇಷ ಆಕರ್ಷಣೆ ಸಂಪ್ರದಾಯದಂತೆ ಯಕ್ಷಗಾನ ಪ್ರಾರಂಭದಿಂದ ಅಂತ್ಯ ದವರೆಗೂ ಗ್ರಾಮೀಣ ಸೊಗಡಿನ ಆಹಾರವಾದ “ಅವಲಕ್ಕಿ (ಸೇಮೆಬಜಿಲ್) ಒಬ್ಬರುಎಷ್ಟು ಬಾರಿಬೇಕಾದರೂ ಸೇವಿಸಬಹುದು,ಸೇವಿಗೆ ಮಸಾಲ ಚಹಾ ನಿರಂತರ ಪೂರೈಕೆಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್ ಎಲ್ ನಾಯಕ್,ಸದಾಶಿವ ರಾವ್ ನೆಲ್ಯಾಡಿ,ಹಾಗೂ ಎ.ಎಸ್ ಭಟ್ ,ವಿಠೋಬ ಭಂಡಾರ್ಕರ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular