ಮಂಗಳೂರು : ನಗರದ ಹಂಪನಕಟ್ಟೆ ಕ್ಲಾಕ್ ಟಾರ್ ಸಮೀಪದ ಡಿವೈಡರ್ಗಳಿಗೆ ಸೂಕ್ತ ರೀತಿಯ ತಡೆ ಬೇಲಿಯನ್ನು ಅಳವಡಿಸಲು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲವೆಂಬ ಎಂಬ ಮಾಹಿತಿ ದೊರೆತಿದೆ.
ಮಂಗಳೂರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದ ಡಿವೈಡರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ತಡೆಬೇಲಿಯನ್ನು ಅಳವಡಿಸದೇ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ದಟ್ಟಣೆಯ ಸಮಯದಲ್ಲೂ ರಸ್ತೆ ದಾಟುತ್ತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ, ರಸ್ತೆಯ ವಿಭಾಜಕ ಅವೈಜ್ಞಾನಿಕವಾಗಿರುವ ಕಾರಣ ಅನೇಕ ವಾಹನಗಳು ವಿಭಾಜಕಕ್ಕೆ ಡಿಕ್ಕಿ ಹೊಡೆದು ಅಪಾಯ ಸಂಭವಿಸಿದ್ದು ವಿಭಾಜಕ ಕೂಡಾ ಹಾನಿಯಾಗಿದೆ. ಇನ್ನು ಮಂಗಳೂರು ಯುನಿವರ್ಸಿಟಿಯಿಂದ ಕ್ಲಾಕ್ ಟವರ್ ತನಕದ ವಿಭಾಜಕದಲ್ಲಿ ಸರಿಯಾದ ತಡೆ ಬೇಲಿ ಕೂಡಾ ಅಳವಡಿಸದೆ ನಿರ್ಲಕ್ಷ್ಯ ತೋರಿಸಲಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ಯುನಿವರ್ಸಿಟಿ ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ನಿತ್ಯ ಸಂಚರಿಸುವ ಜನರಿಗೆ ಸಂಚಕಾರ ತಂದಿದೆ. ಸ್ಥಳಕ್ಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಸೇರಿದಂತೆ ಸ್ಥಾಯಿ ಸಮೀತಿ ಸದಸ್ಯರು ಭೇಟಿಯನ್ನು ನೀಡಿದ್ರು.ಈ ಬಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಅವರು ಈ ಬಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ರು. ಮುಂದಿನ ದಿನಗಳಲ್ಲಿ ಇಲ್ಲಿ ತಡೆಬೇಲಿ ನಿರ್ಮಾಣ ಮಾಡಲಾಗುವುದು ಜನದಟ್ಟಣೆಯ ಸ್ಥಳವಾಗಿರೋದರಿಂದ ಆಕರ್ಷಣೆ ಸ್ಥಳವನ್ನವಾಗಿ ಮಾಡಲಾಗುವುದು ಎಂದು ಹೇಳಿದ್ದರು.
ಆದರೆ ವಾರ ಕಳೆದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಅವರ ಮಾತಿಗೆ ಕವಡೆ ಕಾಸಿನ ಬೆಲೆ ಕೊಡದೆ ಇರುವುದು ನೋಡಿದ್ರೆ ಇಲ್ಲಿ ಏನಾದರೂ ದೊಡ್ಡ ಅನಾಹುತ ಸಂಭವಿಸಿದರೆ ಚರ್ಮದ ಅಧಿಕಾರಿಗಳು ಜವಾಬ್ದಾರರಾಗ್ತಾರೆ ಎಂಬುದು ಸಾರ್ವಜನಿಕರ ಮಾತು.