ಮಂಗಳೂರು : ಬಿ.ಎಸ್ ಅಲ್ಲೋನ್ಸಾ ಎನ್ನುವವಳಾದ ವಿಧ್ಯಾರ್ಥಿನಿ 2022ರಲ್ಲಿ ಸೇಂಟ್ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ಮುಲ್ಕಿ ಪ್ರವೇಶ ಹೊಂದಿದ್ದು ಮೊದಲ ಶೈಕ್ಷಣಿಕ ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಪ್ರವೇಶವನ್ನು ಹೊಂದಿದ್ದಳು ಆದರೆ ಈ ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಮೇಲೆ ದೌರ್ಜನ್ಯ ದಿಂದ ಹಲವು ವಿಧ್ಯಾರ್ಥಿಗಳ ಭವಿಷ್ಯವನ್ನೇ ನಾಶಗೊಳಿಸಿದ್ದಾರೆಂದು ಎಂದು ತಿಳಿಸಿದ್ದಾರೆ.
ಪೋಷಕರು ಇದಕ್ಕೆ ಸಂಬಂಧಪಟ್ಟ ಕಾಲೇಜಿನ ಶುಲ್ಕವನ್ನು ಕೂಡ ಬರಿಸಿದ್ದು ಆದರೆ 2024ರ ಅಕ್ಟೋಬರ್ 5ನೇ ತಾರೀಕಿನಂದು ಮೊಬೈಲ್ ಬಳಕೆ ಮಾಡಿದೆ ಎನ್ನುವ ಕಾರಣಕ್ಕೆ ಕಾಲೇಜಿನಿಂದ ಅಮಾನತು ಮಾಡಿ ರಾತ್ರೋ ರಾತ್ರಿ ನನ್ನನ್ನು ಮನೆಗೆ ಕಳುಹಿಸಿದ್ದಾರೆಂದು ತಿಳಿಸಿದ್ದಾರೆ. ಲೋಕಲ್ ಗಾರ್ಡಿಯನ್ ಗೂ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ಆದರೆ ಪೋಷಕರು ತೆರಳಿ ಕಾರಣ ಕೇಳಿದ್ದು ಕಾಲೇಜಿನ ಪ್ರಾಂಶುಪಾಲರಾಗಲಿ, ಕಾಲೇಜಿನ ನಿರ್ದೇಶಕ ಎರಿಕ್ ಲೋಬೋ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮನ್ನು ಅನೇಕ ಬಾರಿ ಕಾಯಿಸಿ ಅವಮಾನಿಸಿ ಕಳುಹಿಸಿರುವುದು ಕೂಡ ಇದ್ದು. ಜೊತೆಗೆ ಬೇರೆ ಕಾಲೇಜಿಗೆ ಸೇರಲು ಅನೇಕ ಬಾರಿ ಹೋಗಿ ನನ್ನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂಕ ಪ್ರತಿಗಳನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ ನೀಡದೆ ಸತಾಯಿಸುತ್ತಿದ್ದು ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜವವಾಗಿಲ್ಲ. ಬೇರೆ ಕಾಲೇಜಿಗೆ ಸೇರಲು ಬಿಡದೆ ನನ್ನ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಮುಲ್ಕಿ ನರ್ಸಿಂಗ್ ಕಾಲೇಜಿನ ಎರಿಕ್ ಲೋಬೋ ಮತ್ತು ಅವರ ಪತ್ನಿ ಸರಿತಾ ಎಂದು ಆರೋಪಿಸಿದ್ದಾರೆ.
ನಾನು ಮಾತ್ರವಲ್ಲದೇ ಈ ರೀತಿ ಅನೇಕ ವಿದ್ಯಾರ್ಥಿಗಳಿಗೆ ಇದೇ ರೀತಿಯ ಮೋಸವನ್ನು ಮತ್ತು ಬ್ಲ್ಯಾಕ್ ಮೇಲ್ ಮಾಡಿದ್ದು ವಕೀಲರ ಮೂಲಕ ನೋಟಿಸ್ ನೀಡಿದರು ಅದಕ್ಕೂ ಪ್ರತಿಕ್ರಿಯೆ ನೀಡದಿರುವುದರಿಂದ ವಿಧ್ಯಾರ್ಥಿನಿ ರೋಸಿಗೋಗಿದ್ದೇನೆ ಮಾನಸಿಕವಾಗಿ ರೋಸಿ ಹೋಗಿದ್ದೇನೆ. ನನ್ನ ಜೀವಕ್ಕೆ ಅಪಾಯ ಆದರೆ ಅದಕ್ಕೆ ಕಾರಣ ಸೇಂಟ್ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ಮುಲ್ಕಿ ಯ ನಿರ್ದೇಶಕ ಎರಿಕ್ ಲೋಬೋ ಮತ್ತು ಸರಿತಾ ಕಾರಣವಾಗಿರುತ್ತಾರೆ ಎಂದು ಪೋಸಿರರಿಗೆ ನೀಡಿದ ದೂರನಲ್ಲಿ ಉಲ್ಲೇಖಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿಧ್ಯಾರ್ಥಿನಿಯ ತಂದೆ ಸೆಬೆಸ್ಟಿನ್ ,ಮೊಹಮ್ಮದ್ ನೌಸಿನ್,ಮೊಹಮ್ಮದ್ ಮುಸ್ತಫಾ,ಮೊಹಮ್ಮದ್ ಆಸಿನ್ ,ಹಾಗೂ ಇನ್ನಿತರರು ಉಪಸ್ಥಿತರಿದ್ದರು.