Thursday, July 23, 2026
Homeಜಿಲ್ಲೆಮಂಗಳೂರು : ಮಾವನ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ,ಕೊಲೆಯತ್ನ ಕೇಸು ದಾಖಲು,ಮಹಿಳೆ ಅರೆಸ್ಟ್.

ಮಂಗಳೂರು : ಮಾವನ ಮೇಲೆ ಸೊಸೆಯಿಂದ ಮಾರಣಾಂತಿಕ ಹಲ್ಲೆ,ಕೊಲೆಯತ್ನ ಕೇಸು ದಾಖಲು,ಮಹಿಳೆ ಅರೆಸ್ಟ್.

ಮಂಗಳೂರು : ವಯೋವೃದ್ಧನಿಗೆ ಸೊಸೆಯೇ ಹಲ್ಲೆ ಮಾಡಿದ ಹೃದಯ ವಿದ್ರಾವಕ ಘಟನೆ ಕುಲಶೇಖರದಲ್ಲಿ ನಡೆದಿದ್ದು ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ .

ಹಲ್ಲೆ ನಡೆಸಿದ ಸೊಸೆಯನ್ನು ಅತ್ತಾವರದ ಕೆಇಬಿ ಅಧಿಕಾರಿ ಉಮಾಶಂಕರಿ ಎಂದು ಗುರುತಿಸಲಾಗಿದೆ. ಹಲ್ಲೆಗೆ ಒಳಗಾದವರು ವಯೋವೃದ್ಧ ಸಂತ್ರಸ್ತ ಪದ್ಮನಾಭ ಸುವರ್ಣ (87) ಎಂದು ತಿಳಿದಿದೆ. ಮಾವನ ಮೇಲೆ ವಾಕಿಂಗ್ ಸ್ಟಿಕ್‌ನಿಂದ ಹಲ್ಲೆ ನಡೆಸಿದ ವಿಡಿಯೋ ವನ್ನು ಸಂತ್ರಸ್ತೆಯ ಪತಿ ವಿದೇಶದಲ್ಲಿ ಸಿಸಿ ಟಿವಿ ಯ ಮೊಬೈಲ್ ಆಪ್ ನಲ್ಲಿ ನೋಡಿದ್ದಾನೆ ,ಈ ಬಗ್ಗೆ ತನ್ನ ತಂಗಿಗೆ ಫೋನ್ ಹಚ್ಚಿ ಘಟನೆಯ ಮಾಹಿತಿ ಪಡೆದು ತಂಗಿಯ ಸೂಚನೆಯಾ ಮೇರೆಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 9 ರಂದು ಈ ಘಟನೆ ನಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ವೃದ್ಧನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪತಿ ವಿದೇಶದಲ್ಲಿದ್ದು ಮನೆಯಲ್ಲಿ ಮಾವ ಅತ್ತೆ ಮಾತ್ರ ಇದ್ದರು. ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸೊಸೆಯ ಮೇಲೆ ಕೊಲೆಯತ್ನ ಕೇಸು ದಾಖಲಿಸಿದ್ದು ಕೆಇಬಿ ಅಧಿಕಾರಿ ಉಮಾಶಂಕರಿಯನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular