Saturday, July 25, 2026
Homeಜಿಲ್ಲೆಮಂಗಳೂರು: ಮಟ್ಕಾ ಜೂಜು ಅಡ್ಡೆ ಮೇಲೆ ಉಳ್ಳಾಲ ಪೊಲೀಸರ ದಾಳಿ ಐವರ ಬಂಧನ.

ಮಂಗಳೂರು: ಮಟ್ಕಾ ಜೂಜು ಅಡ್ಡೆ ಮೇಲೆ ಉಳ್ಳಾಲ ಪೊಲೀಸರ ದಾಳಿ ಐವರ ಬಂಧನ.

ಮಂಗಳೂರು:  ತೊಕ್ಕೊಟ್ಟು ಖಾಸಗಿ ಜಮೀನಿನಲ್ಲಿ ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿದ ಉಳ್ಳಾಲ ಠಾಣೆ ಪೊಲೀಸರು ಮಟ್ಕಾ ಜೂಜಾಡುತ್ತಿದ್ದ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಲ್ಯಾನ್ಸಿ ವೆಗಾಸ್, ನವಾಜ್, ಸತೀಶ್ ಗಟ್ಟಿ, ನಾಸಿರ್ ಮತ್ತು ಮಧು ಅಲಿಯಾಸ್ ಮನು ಎಂದು ಗುರುತಿಸಲಾಗಿದೆ.

ಬಂಧಿತರಿಂದ 7,040 ರೂಪಾಯಿ ನಗದು, ಐದು ಮೊಬೈಲ್ ಫೋನ್‌ಗಳು ಮತ್ತು ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರ ನಿರ್ದೇಶನದಂತೆ ಉಳ್ಳಾಲ ಇನ್ಸ್‌ಪೆಕ್ಟರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಸಿಬ್ಬಂದಿ ಆನಂದ್, ಪಿ ಸಿ ಅಶೋಕ್ ಮತ್ತು ರಿಯಾಜ್ ಅವರು ಕಾರ್ಯಾಚರಣೆ ನಡೆಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular