Saturday, March 15, 2025
Flats for sale
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು : ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು : ಕಲ್ಲಡ್ಕ ಪ್ರಭಾಕರ ಭಟ್ ರ ಶ್ರೀಮ ವಿದ್ಯಾ ಕೇಂದ್ರ ದ ಶಾಲಾ ವಾರ್ಷಿಕೋತ್ಸವ ಬೇಟಿ ನೀಡುವ ಸಂದರ್ಬದಲ್ಲಿ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದರು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವರದಿಗಾರರ ಜೊತೆ ಮಾತಾಡಿ

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ದುರಸ್ಥಿ ಮಾಡುತ್ತೇವೆ ಅಂತಾ ಹೇಳಿದ್ದರು.ಆದರೆ ಕೆಲಸಗಳು ಇನ್ನೂ ನಡೆಯುತ್ತಿಲ್ಲ ವಾರದೊಳಗೆ ಈ ಬಗ್ಗೆ ವಿಶೇಷ ಸಭೆ ಕರೆಯುತ್ತೇನೆ

ಘಾಟ್ ರಸ್ತೆ ದುರಸ್ಥಿ ಆಗದ ಕಾರಣ ತಿಳಿಯುತ್ತೇನೆ , ಶಿರಾಡಿ ಘಾಟ್ ದುರಸ್ಥಿಗೆ ಮೂರು ಪ್ರಕ್ರಿಯೆಗಳ ಮಾತುಕತೆಯಾಗುತ್ತಿದೆ

ತಾತ್ಕಾಲಿಕ ಡಾಂಬರೀಕರಣ,ವೈಟ್ ಟಾಪಿಂಗ್,ಸುರಂಗ ಮಾಡುವ ಪ್ರಕ್ರಿಯೆ ಮಾತುಕತೆಯಲ್ಲಿದೆ .ಈ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡುತ್ತೇವೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ .ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.

ಉಗ್ರ ನಿಯಂತ್ರಣಕ್ಕೆ ರಾಜ್ಯದಲ್ಲಿ ದಿಟ್ಟ ಕ್ರಮ

ಹದಿಮೂರು ಸ್ಲೀಪರ್ ಸೆಲ್ ಗಳನ್ನು ಗುರುತಿಸಿ ಶಂಕಿತರನ್ನು ಜೈಲಿಗೆ ಕಳುಹಿಸಿದ್ದೇವೆ,ತಮಿಳುನಾಡಿನಲ್ಲಿ ಕಾರ್ಯಾಚರಣೆ ಮಾಡಲು ಯತ್ನಿಸಿದವರನ್ನೂ ಸೆರೆ ಹಿಡಿದಿದ್ದೇವೆ .ಈ ಪ್ರಕ್ರಿಯೆ ನಿರಂತರ ವಾಗಿ ನಡೆಯುತ್ತದೆ

ಉಗ್ರ ಲಿಂಕ್ ಬಗ್ಗೆ ಸಮಗ್ರ ಮಾಹಿತಿ ಪಡೆದು ರಾಜ್ಯ ಮತ್ತು ಕೇಂದ್ರ ಒಟ್ಟಿಗೆ ಕೆಲಸ ಮಾಡುತ್ತದೆ

ಮಹಾರಾಷ್ಟ್ರ-ಕರ್ನಾಟಕ ಗಡಿಬಿಕ್ಕಟ್ಟು

ಮಹಾರಾಷ್ಟ್ರ-ಕರ್ನಾಟಕ ಗಡಿಬಿಕ್ಕಟ್ಟು ವಿಚಾರ ಗಡಿಯಲ್ಲಿ ಎಲ್ಲಾ ಬಸ್ ಗಳ ಓಡಾಟ ನಡೆಯುತ್ತಿದೆ

ಈ ಬಗ್ಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹಲವು ಸೂಚನೆ ನೀಡಿದ್ದೇವೆ . ಡಿ.14ರಂದು ಕೇಂದ್ರ ಗೃಹಮಂತ್ರಿಗಳು ಎರಡು ರಾಜ್ಯದ ಸಿಎಂ ಗಳ ಸಭೆ ಕರೆದಿದ್ದಾರೆ

ಮುಂದಿನ ಸೋಮವಾರ ಕೇಂದ್ರಗೃಹ ಸಚಿವರನ್ನು ರಾಜ್ಯದ ಸಂಸದರು ಭೇಟಿಯಾಗಿ ಪರಿಸ್ಥಿತಿಯ ವಿವರ ನೀಡಲಿದ್ದಾರೆ

ಕರ್ನಾಟಕದ ಹಿತ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತ ಕಾಯೋದು ಸರ್ಕಾರದ ಆದ್ಯತೆಯಾಗಿದೆ

ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ಎಂಇಎಸ್ ಸಮಾವೇಶ ಮಾಡಲು ಪ್ರಯತ್ನ ಮಾಡುತ್ತಾರೆ

ಪ್ರತೀ ಬಾರಿಯೂ ಅವಕಾಶ ಕೊಡೋದಿಲ್ಲ,ಈ ಬಾರಿಯೂ ಅವಕಾಶ ಕೊಡೋದಿಲ್ಲ

ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

RELATED ARTICLES

LEAVE A REPLY

Please enter your comment!
Please enter your name here

Most Popular