ಮಂಗಳೂರು : ನಿಧಿ ಸಿಕ್ಕಿದೆ ಎಂದು ನಕಲಿ ಬಂಗಾರವನ್ನು ತೋರಿಸಿ ಮಹಿಳೆ ಸಿಲುಕಿಕೊಂಡು ಸ್ಥಳೀಯರು ದಿಗ್ಬಂದಿಸಿ ಪೋಲಿಸರಿಗೆ ಒಪ್ಪಿಸಿದ ಘಟನೆ ನಗರದ ಗರೋಡಿ ದೇವಸ್ಥಾನದ ಬಳಿ ನಡೆದಿದೆ.

ನಗರದ ಗರೋಡಿ ಬಳಿ ಇರುವ ರೆಡ್ ಬಿಲ್ಡಿಂಗ್ ಬಳಿ ಈ ಘಟನೆ ನಡೆದಿದ್ದು ಈ ಮಹಿಳೆ ಬಂಗಾರವೆಂದು ಹೇಳಿದ್ದು ಬಳಿಕ ಬಿಲ್ಡಿಂಗ್ ಮಾಲಕರು ಪರೀಕ್ಷಿಸಿ ನಕಲಿ ಬಂಗರಾವೆಂದು ತಿಳಿದ ಬಳಿಕ ಮಹಿಳೆಯನ್ನು ಕೂಡಿ ಹಾಕಿ ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಈ ಮಹಿಳೆ ಮೂಲತ ಉತ್ತರ ಭಾರತವರಾಗಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.ಜಾತ್ರೆಯಲ್ಲಿ ಈ ಜನರು ಗುಂಪು ಅಲ್ಲಲ್ಲಿ ನಿಧಿಯಿಂದ ಚಿನ್ನಾಭರಣ ಸಿಕ್ಕಿದ್ದು ಸ್ಪಷ್ಟಪಡಿಸಲು ನಿಜವಾದ ಬಂಗಾರವನ್ನು ತೋರಿಸಿ ಜನರನ್ನು ಯಾಮರಿಸಿ ಬಳಿಕ ನಕಲಿ ಬಂಗಾರವನ್ನು ತೋರಿಸಿ ಮೋಸಮಾಡುವ ಜಾಲವನ್ನು ಸ್ಥಳೀಯರು ಪೋಲಿಸರರಿಗೆ ಒಪ್ಪಿಸಿದ್ದಾರೆ.ಇನ್ನುಳಿದ ಜೊತೆಗಾರರು ಸ್ಥಳದಿಂದ ಪರಾರಿಯಾಗಿದ್ದು ಕಂಕನಾಡಿ ನಗರ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
“ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ”… ಹೀಗಂತ ಯಾರಾದ್ರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ. ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸೋ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸ್ತಾ ಇದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ. ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು. ಆದ್ರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಅಂತ ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದ್ರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರೋದು ಒಳ್ಳೆಯದು ಎಂಬುದು ಸ್ಥಳೀಯರ ಮಾತು .