Thursday, November 21, 2024
Flats for sale
Homeದೇಶಮಂಗಳೂರು : ನಾವಿಂದು ಒಬ್ಬರನ್ನೊಬ್ಬರು ದ್ವೇಷ ಮಾಡುವವರ, ಆಕ್ರಮಣಶೀಲರ ಕೈಗೆ ದೇಶವನ್ನು ಕೊಟ್ಟಿದ್ದೇವೆ : ಸಂಸದ...

ಮಂಗಳೂರು : ನಾವಿಂದು ಒಬ್ಬರನ್ನೊಬ್ಬರು ದ್ವೇಷ ಮಾಡುವವರ, ಆಕ್ರಮಣಶೀಲರ ಕೈಗೆ ದೇಶವನ್ನು ಕೊಟ್ಟಿದ್ದೇವೆ : ಸಂಸದ ಸಸಿಕಾಂತ್ ಸೆಂಥಿಲ್‌.

ಮಂಗಳೂರು : ಸಂತ ಮದರ್ ತೆರೆಸಾ ಸಂಸ್ಮರಣಾ ದಿನದ ಅಂಗವಾಗಿ ಸಂತ ಮದರ್ ತೆರೆಸಾ ವಿಚಾರ ವೇದಿಕೆ, ಸಾಮರಸ್ಯ ಮಂಗಳೂರು ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ‘ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ’ ವಿಚಾರ ಸಂಕಿರಣವನ್ನು ಸಂಸದ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಸಿಕಾಂತ್ ಸೆಂಥಿಲ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮದರ್ ತೆರಾಸಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿದ ಅವರು ನಾವಿಂದು ಒಬ್ಬರನ್ನೊಬ್ಬರು ದ್ವೇಷ ಮಾಡುವವರ, ಆಕ್ರಮಣಶೀಲರ ಕೈಗೆ ದೇಶವನ್ನು ಕೊಟ್ಟಿದ್ದೇವೆ. ಎಲ್ಲರೂ ಸಂತೋಷದಿಂದ ಕೂಡಿ ಬಾಳಬಹುದು ಎಂಬುದನ್ನು ನಂಬುವವರ ಸಂಖ್ಯೆಯೇ ದೇಶದಲ್ಲಿ ಜಾಸ್ತಿ ಇದೆ. ಪರಸ್ಪರ ನಂಬಿಕೆ ಇಲ್ಲದವರು, ದ್ವೇಷಿಸುವವರು ಇಲ್ಲಿ ಅಲ್ಪಸಂಖ್ಯಾತರು. ಭಾರತೀಯ ಚಿಂತನೆ ಇರುವುದು ಪರಸ್ಪರ ನಂಬುಗೆಯಲ್ಲಿ. ದೇಶದ ವಿಭಿನ್ನತೆಯಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟವರೆಲ್ಲ ನಮ್ಮ ಕಡೆ. ನಾವೆಲ್ಲ ಒಟ್ಟು ಸೇರಿ ದೊಡ್ಡ ಧ್ವನಿಯಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು. ನೂರಾರು ವರ್ಷಗಳಿಂದ ನಾವು ಮಕ್ಕಳನ್ನು ಸ್ಪರ್ಧೆಗೆ ಅಣಿಗೊಳಿಸುತ್ತಿದ್ದೇವೆ. ನಮಗೆ ಬೇಕಿರುವುದು ಸ್ಪರ್ಧೆಯಲ್ಲ; ಪರಸ್ಪರ ಸಹಕಾರ’ ಎಂದು ತಮಿಳುನಾಡಿನ ತಿರುವಳ್ಳುವರ್ ಕ್ಷೇತ್ರದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.

ಬಳಿಕ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಸಾದ್ ಮಾತನಾಡಿ, ತ್ರಿವರ್ಣ ಧ್ವಜವನ್ನೇ ಅಶುಭ ಎಂದು ಹೇಳಿದ‌ವರು, ಸಂವಿಧಾನದಡಿ ಪ್ರಮಾಣ ಸ್ವೀಕರಿಸಿ ಈಗ ಸಂವಿಧಾನವನ್ನೇ ಬದಲಾಯಿಸಿ ಎನ್ನುತ್ತಿದ್ದಾರೆ. ಅಸ್ಪೃಶ್ಯತೆಯಂತಹ ಪದ್ಧತಿ ಮುಂದುವರಿಯಬೇಕು ಎಂದು ಬಯಸುವವರು ಹಿಂದುತ್ವದ ಸೋಗಿನಲ್ಲಿ‌ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಯಾರು ಏನನ್ನು ತಿನ್ನ ಬೇಕು, ಯಾವ ಬಟ್ಟೆ ಧರಿಸಬೇಕು ಎಂದು ನಿರ್ಧರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ದೇಶಕ್ಕೊಂದೇ ಚುನಾವಣೆ, ದೇಶಕ್ಕೊಬ್ಬನೇ ನಾಯಕ ಎನ್ನುತ್ತಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅವರು ದೇಶವನ್ನು ಮತ್ತೆ 500 ವರ್ಷ ಹಿಂದಕ್ಕೆ ಒಯ್ಯುತ್ತಾರೆ’ ಎಂದರು.

ಸಾಮಾಜಿಕ ಚಿಂತಕಿ, ಆಯೆಷಾ ಫರ್ಜಾನ‌ ಮಾತನಾಡಿ ಯು.ಟಿ., ‘ಕರುಣೆ ಪ್ರೀತಿ ಭ್ರಾತೃತ್ವ ಅಚರಣೆಯನ್ನೇ ಬದುಕಿನ ಮಂತ್ರವನ್ನಾಗಿಸಿದ ಮನುಕುಲದ ಅತ್ಯಂತ ದೊಡ್ಡ ದೀವಿಗೆ ಮದರ್‌ ತೆರೆಸಾ’ ಎಂದರು. ಅಧ್ಯಕ್ಷತೆಯನ್ನು ಸಂತ ಮದರ್ ತೆರೆಸಾ ವೇದಿಕೆ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೊ ವಹಿಸಿದ್ದರು. ಸಸಿಕಾಂತ್‌ ಸೆಂಥಿಲ್ ಅವರನ್ನು ಸಂಘಟನೆಯ ವತಿಯಿಂದ ಅಭಿನಂದಿಸಲಾಯಿತು. ಸಂಘಟನೆಯ ಮಂಜುಳಾ ನಾಯಕ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮೊದಲಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular