Tuesday, February 24, 2026
Flats for sale
Homeಜಿಲ್ಲೆಮಂಗಳೂರು: ತೀವ್ರ ನೀರಿನ ಅಭಾವ - ಮೇ 4 ರಿಂದ 2 ದಿನಕ್ಕೊಮ್ಮೆ ನೀರು.

ಮಂಗಳೂರು: ತೀವ್ರ ನೀರಿನ ಅಭಾವ – ಮೇ 4 ರಿಂದ 2 ದಿನಕ್ಕೊಮ್ಮೆ ನೀರು.

ಮಂಗಳೂರು ; ಬೇಸಿಗೆಯ ಬಿಸಿಲಿನ ತಾಪದಿಂದ ನೇತ್ರಾವತಿ ನದಿಗೆ ನೀರಿನ ಒಳಹರಿವು ಸ್ಥಗಿತಗೊಂಡಿದ್ದು, ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಹೀಗಾಗಿ ಮೇ 4ರಿಂದ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಡಿತರ ನೀರು ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ, ಆಡಳಿತವು ಈ ಕೆಳಗಿನ ನಿರ್ಧಾರಗಳನ್ನು ಮಾಡಿದೆ:

ಮಂಗಳೂರು ದಕ್ಷಿಣ ಮತ್ತು ಸುರತ್ಕಲ್‌ಗೆ ಪರ್ಯಾಯ ದಿನಗಳಲ್ಲಿ ನೀರು ಬಿಡಲಾಗುವುದು.

ನಿರ್ಮಾಣ ಚಟುವಟಿಕೆಗಳಿಗೆ ಮತ್ತು ವಾಹನಗಳನ್ನು ತೊಳೆಯುವ ಸೇವಾ ಕೇಂದ್ರಗಳಿಗೆ ನೀರು ಸರಬರಾಜು ಮುಂದಿನ ಸೂಚನೆ ತನಕ ಸ್ಥಗಿತಗೊಳ್ಳುತ್ತದೆ. ನೀರು ಪೋಲಾಗುತ್ತಿರುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ನೀರು ಸರಬರಾಜು ಸಂಪರ್ಕ ಕಡಿತಗೊಳಿಸಲಾಗುವುದು.

ಮೇ 5 ರಂದು ಮಂಗಳೂರು ಉತ್ತರಕ್ಕೆ ಮತ್ತು ಮೇ 6 ರಂದು ಮಂಗಳೂರು ದಕ್ಷಿಣಕ್ಕೆ ಮತ್ತು ಹೀಗೆ ಪರ್ಯಾಯ ದಿನಗಳಲ್ಲಿ ನೀರು ಬಿಡಲಾಗುವುದು.

ಈ ರೀತಿ ನೀರು ಬಿಡುವುದು ಅನಿವಾರ್ಯವಾಗಿರುವುದರಿಂದ ಜನರು ಈ ಸಮಸ್ಯೆಯನ್ನು ಅರಿತು ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular