Saturday, July 18, 2026
Homeಜಿಲ್ಲೆಮಂಗಳೂರು : ಕದ್ರಿ ಠಾಣಾ ಪೊಲೀಸರ ಬಿರುಸಿನ ಕಾರ್ಯಾಚರಣೆ,ಅಕ್ರಮ ಜಾನುವಾರ ಸಾಗಾಟ ಮಾಡುತ್ತಿದ್ದ ಮೂವರ ಬಂಧನ.

ಮಂಗಳೂರು : ಕದ್ರಿ ಠಾಣಾ ಪೊಲೀಸರ ಬಿರುಸಿನ ಕಾರ್ಯಾಚರಣೆ,ಅಕ್ರಮ ಜಾನುವಾರ ಸಾಗಾಟ ಮಾಡುತ್ತಿದ್ದ ಮೂವರ ಬಂಧನ.

ಮಂಗಳೂರು : ಮಂಗಳೂರಿನ ಕದ್ರಿ ಠಾಣಾ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದು ಇಂದು ಬೆಳಗ್ಗೆ ಅಕ್ರಮ ಜಾನುವಾರ ಸಾಗಾಟ ಜಾಲವನ್ನು ಭೇದಿಸಿದ್ದಾರೆ.

ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕದ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ರಾಷ್ಟ್ರೀಯ ಯ ಹೆದ್ದಾರಿ 66 ರಲ್ಲಿ‌ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ಲಾರಿಯನ್ನು‌ ತಡೆದಿದ್ದಾರೆ.

ಶಿವಮೊಗ್ಗ ದಿಂದ ಕೇರಳದ ಹೊಸಂಗಡಿಗೆ ಸಾಗಾಟ ಮಾಡಲು ಯತ್ನಿಸಿದ್ದ ಅಕ್ರಮವಾಗಿ ಸಾಗಿಸುತ್ತಿದ್ದ 34 ಜಾನುವಾರುಗಳ ರಕ್ಷಣೆ ಮಾಡಿದ್ದಾರೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಕೇರಳದ ಕಸಾಯಿಖಾನೆಗೆ‌ ಸಾಗಿಸಲಾಗುತ್ತಿದ್ದು ಮೈಸೂರಿನ ದಸ್ತಗೀರ್ ಸಾಬ್ (45), ಖತಿಪ್ ಪಾಷಾ ಹಾಗೂ ಅಯೂಬ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ಕಲಂ 5, 6, 12 ಕರ್ನಾಟಕ ಗೋ ಹತ್ಯೆ ತಡೆ ಮತ್ತು ಗೋ ಸಂರಕ್ಷಣಾ ಕಾಯ್ದೆ ಮತ್ತು ಕಲಂ 11 ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಯಡಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular