Sunday, December 14, 2025
Flats for sale
Homeಜಿಲ್ಲೆಮಂಗಳೂರು : ಡ್ರಗ್ ಪೆಡ್ಲರ್ ಗಳಿಗೆ ಮಾದಕ ವಸ್ತು (MDMA) ಸರಬರಾಜು ಮಾಡುತ್ತಿದ್ದ ತಂಡದ ಬಂಧನ.

ಮಂಗಳೂರು : ಡ್ರಗ್ ಪೆಡ್ಲರ್ ಗಳಿಗೆ ಮಾದಕ ವಸ್ತು (MDMA) ಸರಬರಾಜು ಮಾಡುತ್ತಿದ್ದ ತಂಡದ ಬಂಧನ.

ಮಂಗಳೂರು : ಬೆಂಗಳೂರಿನಿಂದ ಮಾದಕ ವಸ್ತು (MDMA) ಯನ್ನು ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದಂತಹ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂಧಿಗಳು ಬಂಧಿಸಿದ್ದಾರೆ.

ಡಿ:13. ರಂದು ಕಾರಿನಲ್ಲಿ ಬರುತ್ತಿದ್ದ ಅಹಮ್ಮದ್ ಶಾಬೀತ್, ಮತ್ತು ಆತನ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಗಳನ್ನು ಮಲ್ಲೂರು ನಿವಾಸಿ ಅಹಮ್ಮದ್ ಶಾಬೀತ್ (35) ಬಂಟ್ವಾಳ ವಿವಾಸಿ ಮಹಮ್ಮದ್ ಶಂಶೀರ್ (36) ಹಾಗೂ ಬಂಟ್ವಾಳ ನಿವಾಸಿ ಶ್ರೀಮತಿ ನೌಶೀನ (27) ಎಂದು ತಿಳಿದುಬಂದಿದೆ.

ಆರೋಪಿಗಳಿಂದ MDMA ಮಾದಕ ವಸ್ತು 90 ಗ್ರಾಂ ಬಿಳಿ ಬಣ್ಣದ KL-58-W-6342 ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಲಾಗಿದೆ. ಆರೋಪಿ ಅಹಮ್ಮದ್ ಶಾಬೀತ್ ಎಂಬುವನು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತುವಾದ MDMA ಯನ್ನು ತಂದು ಸರಬರಾಜು ಮಾಡುತ್ತಿದ್ದು, ಅಲ್ಲದೇ ಈ ತಂಡದಲ್ಲಿ ಯಾರಿಗೂ ಅನುಮಾನ ಬಾರದಂತೆ ನೌಶಿನ ಎಂಬ ಮಹಿಳೆಯರನ್ನು ಜೊತೆಗೆ ಇರಿಸಿಕೊಂಡು ಮಾದಕ ವಸ್ತುವಾದ MDMA ಯನ್ನು ಸಾಗಾಟ ಮಾಡುತ್ತಿರುವುದ್ದನು. ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಕಲೆ ಹಾಕಿ, ಈ ತಂಡವನ್ನು ಬಂಧಿಸಿದ್ದು . ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular