ಮಂಗಳೂರು ; ಮಂಗಳೂರು – ಬೆಂಗಳೂರು ವಿಮಾನಗಳ ಸಂಖ್ಯೆ ಹೆಚ್ಚಿಸಲು ಸಂಸ್ಥೆ ಮುಂದಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಜಧಾನಿ ಅಬುಧಾಬಿಗೆ ಪ್ರತಿ ದಿನ ವಿಮಾನ ಹಾರಾಟವನ್ನು ಜುಲೈ 22ರಿಂದ ಆರಂಭಿಸಿ ಮಂಗಳೂರಿನ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಶುಭ ಸುದ್ದಿ ನೀಡಿದೆ.
ಪ್ರತಿ ದಿನದ ವಿಮಾನಗಳ ವೇಳಾಪಟ್ಟಿಯನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಇದೀಗ ಪ್ರಕಟಿಸಿದೆ.
ಜುಲೈ 22 ರಿಂದ ಫ್ಲೈಟ್ IX 819 ರ ಸಂಚಾರದೊಂದಿಗೆ ಪ್ರತಿ ದಿನ ವಿಮಾನ ಸೇವೆ ಪ್ರಾರಂಭವಾಗಲಿದೆ. ಇದು ರಾತ್ರಿ 8:15 ಕ್ಕೆ ಅಬುಧಾಬಿಗೆ ಹೊರಡಲಿದೆ. ಅಲ್ಲಿಂದ ಬರುವ ವಿಮಾನ IX 820 ಬೆಳಿಗ್ಗೆ 5:20 ಕ್ಕೆ ಮಂಗಳೂರಿಗೆ ಆಗಮಿಸುತ್ತದೆ.ಈಗಾಗಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ (IX) ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರದಂದು ಅಬುಧಾಬಿಗೆ ವಾರದಲ್ಲಿ 4 ವಿಮಾನಗಳ ಸಂಚಾರ ನಿರ್ವಹಿಸುತ್ತಿದೆ. ಇದೀಗ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಹೊಸ ವಿಮಾನ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.