Sunday, August 2, 2026
Homeಜಿಲ್ಲೆಮಂಗಳೂರು : ಗಾಂಧಿನಗರದಲ್ಲಿ ರಸ್ತೆಗುರುಳಿದ ಬೃಹತ್ ಮರ: ಸ್ಕೂಟರ್ ಸವಾರ ಕ್ಷಣಾರ್ಧದಲ್ಲಿ ಪಾರು, ಸಿಸಿಟಿವಿಯಲ್ಲಿ ಭಯಾನಕ...

ಮಂಗಳೂರು : ಗಾಂಧಿನಗರದಲ್ಲಿ ರಸ್ತೆಗುರುಳಿದ ಬೃಹತ್ ಮರ: ಸ್ಕೂಟರ್ ಸವಾರ ಕ್ಷಣಾರ್ಧದಲ್ಲಿ ಪಾರು, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ.

ಮಂಗಳೂರು : ನಗರದ ಗಾಂಧಿನಗರದ 8ನೇ ಅಡ್ಡರಸ್ತೆಯಲ್ಲಿ ಬೃಹದಾಕಾರದ ಮರ ರಸ್ತೆಗುರುಳಿ ಬಿದ್ದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಸವಾರ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.

ಮರ ಏಕಾಏಕಿ ರಸ್ತೆ ಮೇಲೆ ಉರುಳಿ ಬೀಳುವ ಹಾಗೂ ಸ್ಕೂಟರ್ ಸವಾರ ಕೂದಲೆಳೆಯ ಅಂತರದಲ್ಲಿ ಪಾರಾಗುವ ರೋಚಕ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ಸ್ಥಳೀಯರು ಮತ್ತು ಸಂಬಂಧಿತ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದರು. ಭಾರೀ ಮಳೆಯ ಪರಿಣಾಮ ಮರ ಉರುಳಿರುವ ಸಾಧ್ಯತೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular