Saturday, July 25, 2026
Homeಜಿಲ್ಲೆಮಂಗಳೂರು ; ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನ ಮೇಲೆ ತಲವಾರು ಬೀಸಿದ ಯುವಕರ ತಂಡ.

ಮಂಗಳೂರು ; ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನ ಮೇಲೆ ತಲವಾರು ಬೀಸಿದ ಯುವಕರ ತಂಡ.

ಮಂಗಳೂರು ; ಮಂಗಳೂರು ಹೊರ ವಲಯದ ಚಿತ್ರಾಪುರ ಮೊಗವೀರ ಮಹಾಸಭಾ ವ್ಯಾಪ್ತಿಯ ಬೀಚ್‍ ಬಳಿ ಗಾಂಜಾ ಅಮಲಿನಲ್ಲಿ ತಲವಾರು ಬೀಸಿದ ಪರಿಣಾಮ ರಿಕ್ಷಾ ಚಾಲಕ ಸುನೀಲ್ ಗೆ ಗಾಯಗೊಂಡಿದ್ದಾರೆ.

ಚಾಲಕನಿಗೆ ತಲವಾರು ಬೀಸಿ ಪುಂಡರು ರಿಕ್ಷಾಗೆ ಹಾನಿಗೊಳಿಸಿದ್ದಾರೆ.

ಓರ್ವನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಘಟನೆ ಖಂಡಿಸಿ ಸ್ಥಳೀಯರಿಂದ ದಿಢೀರ್ ಪ್ರತಿಭಟನೆ ನಡೆಯಿತು.

ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರೂ ಗಂಭೀರ ಕ್ರಮ ಕೈಗೊಳ್ಳದ ಆರೋಪ ಕೂಡ ಕೇಳಿಬಂದಿದೆ.

ಬೀಚ್‍ನಲ್ಲಿ ಗಾಂಜಾ ಮಾರಾಟ, ಗಾಂಜಾ ಸೇವನೆ, ಅನೈತಿಕ ಚಟುವಟಿಕೆ ನಡೆಯುವ ಹಿನ್ನೆಲೆ , ಗ್ರಾಮಸ್ಥರು ವಿರೋಧಿಸಿ ಬೀಚ್‍ಗೆ ಬಾರದಂತೆ ಎಚ್ಚರಿಕೆ ನೀಡಿದ ದ್ವೇಷದಿಂದ ತಲವಾರು ಹಲ್ಲೆ ನಡೆದಿದೆ .

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular