ಮಂಗಳೂರು : ಯಾರದೋ ಷಡ್ಯಂತ್ರಕ್ಕೆ ಬಲಿಯಾಗಿ ಸುಳ್ಳು ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಕೃಷ್ಣವೇಣಿ ಅವರ ಅಮಾನತು ಆದೇಶ ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದ್ದು ಯಾವುದೇ ಚ್ಯುತಿ ತಾರದಂತೆ ಅವರ ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರಿಸಬೇಕು ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದೆ.
ಮನೆ ಕಟ್ಟುವ ಸಂಬAಧ ದೃಢೀಕರಣ ನೀಡಲು ಲಂಚ ಪಡೆದಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಅಧಿಕಾರಿಗಳೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೃಷ್ಣವೇಣಿ ಅವರನ್ನು ಮೇ 28 ರಂದು ಬಂಧಿಸಿದ್ದರು. ಇದರ ವಿರುದ್ಧ ಹೈಕೋರ್ಟ್ಗೆ ಸೂಕ್ತ ದಾಖಲೆಗಳೊಂದಿಗೆ ಕೃಷ್ಣವೇಣಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಕೃಷ್ಣವೇಣಿ ಅವರನ್ನು ಹುದ್ದೆಯಲ್ಲಿ ಮುಂದುವರೆಸಬಹುದು ಎಂದು ಆದೇಶ ನೀಡಿದೆ.
ಯಾರೋ ನೀಡಿದ ಸುಳ್ಳು ದೂರನ್ನು ಆಧರಿಸಿ ಲೋಕಾಯುಕ್ತ ದಾಳಿ ನಡೆಸಿ ನನ್ನನ್ನು ಬಂಧಿಸಿದ್ದಾಗಿ ಕೃಷ್ಣವೇಣಿ ಆರೋಪಿಸಿದ್ದರು.
ಪ್ರಕರಣದ ಹಿನ್ನೆಲೆ: ಈ ಹಿಂದೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಯಾಗಿದ್ದವರೊಬ್ಬರು ಅಕ್ರಮ ಮರಳು ದಂಧೆಗೆ ಸಾಥ್ ನೀಡಿ ಸಿಕ್ಕಿಬಿದ್ದು ಅಮಾನತಾಗಿದ್ದು ಮಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಲಾಗಿತ್ತು. ಇಲ್ಲೂ ತನ್ನ ಚಾಳಿ ಮುಂದುವರಿಸಿದ ಆ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅಕ್ರಮ ಮರಳು ದಂಧೆಕೋರರಿಗೆ ಸಾಥ್ ನೀಡುತ್ತಿದ್ದರು. ಇದನ್ನು ಮನಗಂಡ ಕೃಷ್ಣವೇಣಿ ಅವರು ಮರಳುಗಾರಿಕೆ ಹಾಗೂ ಗಣಿಗಾರಿಕೆ ಪಾರದರ್ಶಕತೆಯಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಸ್ಯಾಂಡ್ ಆ್ಯಪ್ ಹಾಗೂ ಜಿಪಿಎಸ್ ಮತ್ತಿತರ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಅನುಷ್ಠಾನಿಸಲು ಮುಂದಾದರು.
ಇದರಿಂದ ತಮ್ಮ ಅಕ್ರಮಗಳು ಬೆಳಕಿಗೆ ಬರಲಿದೆ ಎಂಬುದನ್ನು ತಿಳಿದ ಅಧಿಕಾರಿ ಅಕ್ರಮ ಮರಳು ದಂಧೆಕೋರರ ಕುಮ್ಮಕ್ಕಿನೊಂದಿಗೆ ಲೋಕಾಯುಕ್ತದಲ್ಲಿ ಸುಳ್ಳು ದೂರನ್ನು ದಾಖಲಿಸಿ, ಕೃಷ್ಣವೇಣಿ ಅವರ ಬಂಧನವಾಗುವAತೆ ಷಡ್ಯಂತ್ರ ಹೆಣೆದರು. ಲೋಕಾಯುಕ್ತ ದಾಳಿ ಸಂದರ್ಭ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಪ್ರದೀಪ್ ಹಾಗೂ ಚಾಲಕ ಮಧು ಅವರು ಸ್ಯಾಂಡ್ ಫೈಲ್‌ಗೆ 5೦ ಸಾವಿರ ರೂಪಾಯಿ ಲಂಚದ ಹಣವನ್ನು ಕೃಷ್ಣವೇಣಿ ಅವರ ಸೂಚನೆ ಮೇರೆಗೆ ಪಡೆದದ್ದಾಗಿ ಹೇಳಿಕೆಯನ್ನು ನೀಡಿದರು. ಇದರಿಂದಾಗಿ ಕೃಷ್ಣವೇಣಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸುವAತಾಯಿತು. ಆದರೆ ಲಂಚದ ವಿಷಯ ತಿಳಿಯದ ಕೃಷ್ಣವೇಣಿ ವೃಥಾ ಸೆರೆಮನೆ ವಾಸ ಅನುಭವಿಸುಂತಾಯಿತು.
ಈ ಹಿನ್ನೆಲೆಯಲ್ಲಿ ಕೃಷ್ಣ ವೇಣಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಪರಿಶೀಲನೆ ನಡೆಸಿದ ಹೈಕೋರ್ಟ್ ಕೃಷ್ಣವೇಣಿ ಅಮಾನತು ಆದೇಶ ರದ್ದುಪಡಿಸಿ ಪುನಃ ಕರ್ತವ್ಯಕ್ಕೆ ಹಾಜರಾಗಬಹುದು ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆಯುಕ್ತರಿಗೆ ಸೂಚಿಸಿದೆ. ಯಾರದೋ ಷಡ್ಯಂತ್ರಕ್ಕೆ ಬಲಿಯಾದ ದಕ್ಷ ಅಧಿಕಾರಿ ಕೃಷ್ಣವೇಣಿ ಆದಷ್ಟು ಬೇಗ ಕರ್ತವ್ಯಕ್ಕೆ ಮರಳಿ ಅಕ್ರಮ ಮರಳು ಲೂಟಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.


