Friday, November 22, 2024
Flats for sale
Homeಜಿಲ್ಲೆಮಂಗಳೂರು: ಖಾಸಗಿ ಬಸ್‌ ಮಹೇಶ್ ಮೋಟಾರ್ಸ್ ನ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು .

ಮಂಗಳೂರು: ಖಾಸಗಿ ಬಸ್‌ ಮಹೇಶ್ ಮೋಟಾರ್ಸ್ ನ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು .

ಮಂಗಳೂರು : ನಗರದ ಖಾಸಗಿ ಬಸ್ ಸೇವೆಯೊಂದರ ಮಾಲೀಕರು ಅಕ್ಟೋಬರ್ 1 ರ ಭಾನುವಾರದಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮ ಅಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಕ ಅವರ ಪುತ್ರ ಮಹೇಶ್ ಮೋಟಾರ್ಸ್ ಮಾಲೀಕ ಪ್ರಕಾಶ್ ಶೇಕ (40) ಮೃತಪಟ್ಟವರು.

ಕದ್ರಿ ಕಂಬಳ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಮತ್ತು ಆತ್ಮಹತ್ಯೆ ಮಾಡಿಕೊಂಡ ರೀತಿ ಇನ್ನೂ ತಿಳಿದುಬಂದಿಲ್ಲ.ಕಳೆದ ೧೫  ವರ್ಷಗಳಿಂದ ಬಸ್ಸು ಉದ್ಯಮದಲ್ಲಿ ಹೆಸರುಗಳಿಸಿದ್ದ ಮಹೇಶ್ ಮೋಟರ್ಸ್ ,ಸಿಮೆಂಟ್ ,ಮಿಕ್ಸರ್ ಲಾರಿ ಹಾಗೂ ಇನ್ನಿತರ ಉದ್ಯಮದಲ್ಲಿ ತೊಡಗಿದ್ದರು ,ನೂರಕ್ಕೂ ಹೆಚ್ಚು ಬಸ್ಸುಗಳ್ಳನ್ನು ಹೊಂದಿದ್ದು ,ಹಲವಾರು ಬಸ್ಸುಗಳು ಕಾಂಟ್ರಾಕ್ಟ್ ಮೂಲಕ ಕೊಟ್ಟಿದ್ದರು,ಇಂದು ಬೆಳಗ್ಗೆ ಹೊರಗ್ಗೆ ಹೋಗಿ ಬಂದಿದ್ದ ಇವರು ಮದ್ಯಾಹ್ನದ ವೇಳೆ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದಿದೆ .ವ್ಯವಹಾರದಲ್ಲಿ ಯಶಸ್ಸು ಕಂಡಿದ್ದ ಇವರು ಯಾತಕ್ಕಾಗಿ ಈ ನಿರ್ಧಾರ ತೆಗೆದಿದ್ದಾರೆ ಎಂಬುದು ರಹಸ್ಯ ವಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹೇಶ್ ಮೋಟಾರ್ಸ್‌ಗೆ ಸೇರಿದ ಅನೇಕ ಸಿಟಿ ಬಸ್‌ಗಳು ಪ್ರತಿದಿನ ಸಂಚರಿಸುತ್ತಿದ್ದು, ಪ್ರಯಾಣಿಕರಲ್ಲಿ ಜನಪ್ರಿಯವಾಗಿದೆ. ಪ್ರಕಾಶ್ ಶೇಕ ಅವರು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಸದಸ್ಯರಾಗಿದ್ದರು ಮತ್ತು ಹಿಂದೆ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರ ನಿಧನಕ್ಕೆ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಹಾಲಿ ಅಧ್ಯಕ್ಷ ಅಜೀಜ್ ಪರ್ತಿಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ಸಂತಾಪ ಸೂಚಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular