Saturday, July 25, 2026
Homeಜಿಲ್ಲೆಮಂಗಳೂರು : ಆಪರೇಷನ್ ನಾರ್ಕೋಸ್: ರೈಲಿನಲ್ಲಿ 3 ಲಕ್ಷ ಮೌಲ್ಯದ ಒಣ ಗಾಂಜಾ ವಶ.

ಮಂಗಳೂರು : ಆಪರೇಷನ್ ನಾರ್ಕೋಸ್: ರೈಲಿನಲ್ಲಿ 3 ಲಕ್ಷ ಮೌಲ್ಯದ ಒಣ ಗಾಂಜಾ ವಶ.

ಮಂಗಳೂರು : ಪಾಲಕ್ಕಾಡ್‌ನ ಸಿಐಬಿ/ಆರ್‌ಪಿಎಫ್ ತಂಡಗಳು, ಮಂಗಳೂರು ಜಂಕ್ಷನ್‌ನ ಆರ್‌ಪಿಎಫ್ ಮತ್ತು ಮಂಗಳೂರು ಪೂರ್ವ ಅಬಕಾರಿ ವಿಭಾಗದ ಜಂಟಿ ಕಾರ್ಯಾಚರಣೆಯ ಪರಿಣಾಮವಾಗಿ ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ 3,16,650 ರೂಪಾಯಿ ಮೌಲ್ಯದ 6.333 ಕೆಜಿ ತೂಕದ ಒಣ ಗಾಂಜಾ ಆಗಸ್ಟ್ 10ರಂದು ಗುರುವಾರ ಬೆಳಗ್ಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ವಶಪಡಿಸಿಕೊಳ್ಳಲಾಗಿದೆ. 

ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ರೈಲಿನಲ್ಲಿ ಕೈಬಿಟ್ಟ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಮಂಗಳೂರು ಪೂರ್ವ ಅಬಕಾರಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಯಾರನ್ನೂ ಬಂಧಿಸಿಲ್ಲ. ಆಪರೇಷನ್ ನಾರ್ಕೋಸ್ ಅಡಿಯಲ್ಲಿ ದಾಳಿ ನಡೆಸಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular