ಬೈರೂತ್ : ಸಾವಿರಾರು ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 550 ಜನರು ಹತ್ಯೆಯಾಗಿರುವ ಘಟನೆ ನಡೆದಿದೆ.
24 ಮಕ್ಕಳು ಮತ್ತು 42 ಮಹಿಳೆಯರು ಸೇರಿದಂತೆ ಕನಿಷ್ಠ 550 ಜನರು ಸಾವನ್ನಪ್ಪಿದ್ದಾರೆ ಮತ್ತು1645 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. 1975-1990 ರ ಅಂತರ್ಯುದ್ಧದ ನAತರ ಹಿಂಸಾಚಾರದಿAದ ಲೆಬನಾನ್‌ನ ಅತಿ ಹೆಚ್ಚು ದೈನಂದಿನ ಸಾವಿನ ಸಂಖ್ಯೆ ಇದಾಗಿದೆ ಹತ್ತಾರು ಸಾವಿರ ಜನರು ಲೆಬನಾನ್‌ನ ತೊರೆದಿದ್ದಾರೆ.
ಜನರು ಸುರಕ್ಷತೆಗೆ ಆಧ್ಯತೆ ನೀಡಿದ್ದಾರೆ ಜೀವ ಭಯದಿಂದ ಪಲಾಯನಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಯುದ್ಧ ಭುಗಿಲೆದ್ದ ನಂತರ ಕೆಲವು ಭಾರಿ ಗಡಿಯಾಚೆಗಿನ ಗುಂಡಿನ ವಿನಿಮಯದ ನಂತರ ಇತ್ತೀಚೆಗೆ ಬಾರಿ ಪ್ರಮಾಣದಲ್ಲಿ ದಾಳಿ ಪ್ರತಿದಾಳಿ ನಡೆಯುತ್ತಿದ್ದು ಈ ಘಟನೆ ನಡೆದಿದೆ ಎಂದು ತಿಳಿಸಿಲಾಗಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನಿನ ಜನರನ್ನು ಉದ್ದೇಶಿಸಿ ಕಿರು ವೀಡಿಯೊ ಹೇಳಿಕೆಯನ್ನು ಕಳುಹಿಸಿದ್ದು “ಇಸ್ರೇಲ್‌ನ ಯುದ್ಧ ನಿಮ್ಮೊಂದಿಗೆ ಅಲ್ಲ, ಅದು ಹಿಜ್ಬುಲ್ಲಾನೊಂದಿಗೆ. ಬಹಳ ಸಮಯದಿಂದ ಹಿಜ್ಬುಲ್ಲಾ ನಿಮ್ಮನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ” ಎಂದು ಅವರು ಹೇಳಿದ್ದಾರೆ. ಲೆಬನಾನಿನ ಮಂತ್ರಿ ನಾಸರ್ ಯಾಸಿನ್ ಪ್ರತಿಕ್ರಿಯಿಸಿ ಶಾಲೆಗಳಲ್ಲಿ 89 ತಾತ್ಕಾಲಿಕ ಆಶ್ರಯಗಳು ಮತ್ತು ಇತರ ಸೌಲಭ್ಯಗಳನ್ನು ಸಕ್ರಿಯಗೊಳಿಸಲಾಗಿದೆ ನಾಗರಿಕರು “ಇಸ್ರೇಲಿ ದೌರ್ಜನ್ಯಗಳಿಂದ” 26,೦೦೦ ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ ಎಂದಿದ್ದಾರೆ.
ದಕ್ಷಿಣ ಗಡಿಯಲ್ಲಿರುವ ಗಾಜಾದಲ್ಲಿ ಹಮಾಸ್ ವಿರುದ್ಧ ಸುಮಾರು ಒಂದು ವರ್ಷದ ಯುದ್ಧದ ನಂತರ, ಇಸ್ರೇಲ್ ತನ್ನ ಗಮನವನ್ನು ಉತ್ತರದ ಗಡಿಯತ್ತ ಬದಲಾಯಿಸುತ್ತಿದೆ, ಅಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಇರಾನ್‌ನ ಬೆಂಬಲದೊAದಿಗೆ ಹಮಾಸ್‌ಗೆ ಬೆಂಬಲವಾಗಿ ಇಸ್ರೇಲ್‌ಗೆ ರಾಕೆಟ್‌ಗಳನ್ನು ಹಾರಿಸುತ್ತಿದೆ. ಇನ್ನಷ್ಟು ವೈಮಾನಿಕ ದಾಳಿ ಇಸ್ರೇಲ್ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹಿರಿಯ ಹಿಜ್ಬುಲ್ಲಾ ನಾಯಕ ಅಲಿ ಕರಕಿ, ದಕ್ಷಿಣ ಮುಂಭಾಗದ ಮುಖ್ಯಸ್ಥರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ, ಇನ್ನಷ್ಟು ದಾಳಿ ನಡೆಯುವ ಸಾಧ್ಯತೆ ಇದೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಗಡಿಯಾಚೆಗಿನ ಹೋರಾಟದ ಕಾರಣ ಉತ್ತರ ಇಸ್ರೇಲ್ನಿಂದ ಸುಮಾರು ೬೦,೦೦೦ ಜನರನ್ನು ಸ್ಥಳಾಂತರಿಸಲಾಗಿದೆ. ನಿವಾಸಿಗಳು ತಮ್ಮ ಮನೆಗಳಿಗೆ ಹಿಂದಿರುಗುವವರೆಗೆ ಅಭಿಯಾನ ಮುಂದುವರಿದಿದೆ.