Saturday, July 25, 2026
Homeರಾಜ್ಯಬೆಳಗಾವಿ : ಉತ್ತಮ ಮಳೆ ಬೆಳೆಗಾಗಿ ಗ್ರಾಮೀಣ ಭಾಗದಲ್ಲಿ ಜೋಕುಮಾರ ಸ್ವಾಮಿಯ ಪೂಜೆ.

ಬೆಳಗಾವಿ : ಉತ್ತಮ ಮಳೆ ಬೆಳೆಗಾಗಿ ಗ್ರಾಮೀಣ ಭಾಗದಲ್ಲಿ ಜೋಕುಮಾರ ಸ್ವಾಮಿಯ ಪೂಜೆ.

ಬೆಳಗಾವಿ : ಜೋಕುಮಾರ ಕೃಷಿಕರ ಅಚ್ಚು ಮೆಚ್ಚಿನ ದೇವರು, ಮಳೆ ಬೆಳೆ ತರಿಸುವ ಮೂಲಕ ಜನತೆಯ ಬಾಧೆ ದೂರ ಮಾಡುವ ಕಾಮದೇನ ಕಲ್ಪವೃಕ್ಷವಾಗಿರುವ ದೇವರು. ಈ ದೇವರ ಆರಾಧನೆಯಿಂದ ಎಲ್ಲ ದುಗುಡ ಮಾಯಾ ಎಂಬುದು ನಂಬಿಕೆ.ತಲೆ ಮೇಲೆ ಹೊತ್ತು ತಿರುಗಿ ಮನೆ, ಮನೆಗಳಲ್ಲಿ ಮಹಿಳೆಯರು ಪೂಜೆ ಸಲ್ಲಿಸುತ್ತಾರೆ.

ಜೋಕುಮಾರನ ಮೂರ್ತಿ ಬಲು ವಿಚಿತ್ರ, ಅಗಲವಾದ ಮುಖ, ದಿಟ್ಟ ಕಣ್ಣುಗಳು, ಎತ್ತರದ ತಿಲಕ, ಚೂಪಾದ ಮೀಸೆ, ತೆರದ ಬಾಯಿ, ಹಣೆಯ ತುಂಬ ವಿಭೂತಿ, ಕುಂಕುಮ ಇಷ್ಟೆಲ್ಲ ಶೋಭಾಮಯವಾಗಿ ಬೇವಿನ ತೊಪ್ಪಲಿರುವ ಬುಟ್ಟಿಯೊಳಗೆ ಏಳು ದಿನ ಕುಳ್ಳಿರಿಸಿಕೊಂಡು ವಿವಿಧ ಊರು ಕೇರಿಗಳಲ್ಲಿ ತಿರುಗಿಸುವ ಮಹಿಳೆಯರು ಗಂಗಾಮತ, ಅಂಬಿಗರು, ಸುಣಗಾರ, ಕಬ್ಬಲಿಗ, ಗಂಗೆಯ ಮಕ್ಕಳು ಜೋಕುಮಾರನ ವರ್ಣನೆಯ ಜನಪದ ಗೀತೆಗಳ ಮೂಲಕ ಲಯಬದ್ಧವಾಗಿ ಹಾಡು ಹೇಳುತ್ತಾ ಅವನನ್ನು ವರ್ಣಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular