ಬೆಂಗಳೂರು ; ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ರಾಜಕೀಯ ದುರುದ್ದೇಶದಿಂದಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯರು ತೀವ್ರ ಗದ್ದಲ ನಡೆಸಿದ ಘಟನೆ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು. ಶೂನ್ಯವೇಳೆಯಲ್ಲಿ ವಿಷಯವನ್ನು ಸ್ಪೀಕರ್ ಯು.ಟಿ.ಖಾದರ್ ಗಮನಕ್ಕೆ ತಂದ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, `ಪ್ರಚೋದನೆ ಆರೋಪದ ಮೇಲೆ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಮನಕಾರಿ ನೀತಿಯನ್ನು ಅನುಸರಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಳಿದ ಶಾಸಕರು ಬೆಲ್ಲದ ಅವರಿಗೆ ಧ್ವನಿಗೂಡಿಸಿ, ಹತ್ತಾರು ಸಮಾರಂಭಗಳಿಗೆ ಹೋಗುವ ಶಾಸಕರು, ಅಲ್ಲಿ ಗಲಾಟೆ ಆದರೆ ಪ್ರಚೋದನೆ ನೀಡಿದಂತಾಗುವುದೇ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಪ್ರಶ್ನಿಸಿದರು.ನಾನು ಯಾರನ್ನೂ ಹೊಡೆದಿಲ್ಲ. ಅಥವಾ ಪ್ರಚೋದನೆಯನ್ನೂ ನೀಡಿಲ್ಲ. ನಾನು ಕ್ಷೇತ್ರದಲ್ಲಿ ಭಾಗಿಯಾಗಿದ್ದ ಸಮಾರಂಭವೊAದನ್ನು ಮುಗಿಸಿ ಹೊರಬರುವಾಗ, ಓರ್ವ ವ್ಯಕ್ತಿ ಪರಿಶಿಷ್ಟ ಜಾತಿಯ ಇನ್ನೋರ್ವ ವ್ಯಕ್ತಿಗೆ ಹೊಡೆದ. ನಂತರ ಹೊಡೆದವನೇ ಹೋಗಿ ಆಸ್ಪತ್ರೆಗೆ ದಾಖಲಾದ. ನನ್ನ ಮೇಲೆ ಹೊಡೆದಿರುವ ಮತ್ತು ಗದ್ದಲಕ್ಕೆ ಪ್ರಚೋದನೆ ನೀಡಿರುವ ದೂರು ದಾಖಲಾಯಿತು. ಹೀಗಾದರೆ ಶಾಸಕರ ರಕ್ಷಣೆಯ ಗತಿ’ ಎಂದು ವೇದವ್ಯಾಸ ಕಾಮತ್ ಸ್ಪೀಕರ್ ಉದ್ದೇಶಿಸಿ ಕೇಳಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ, `ಸದನ ನಡೆಯುತ್ತಿರುವಾಗ ಶಾಸಕರ ಮೇಲೆ ಪ್ರಕರಣ ದಾಖಲಾಗಿದೆ. ಇದು ಸರಿಯಲ್ಲ, ಸ್ಪೀಕರ್ ಕೂಡಲೇ ಶಾಸಕರ ರಕ್ಷಣೆಗೆ ಬರಬೇಕು’ ಎಂದು ಪಟ್ಟು ಹಿಡಿದರು. ಕಾಂಗ್ರೆಸ್ ಪಕ್ಷದ ರಾಜಕೀಯ ಈ ದೂರಿನ ಹಿಂದೆ ಇದೆ ಎಂಬುದಾಗಿ ಅಶೋಕ, ಬೆಲ್ಲದ ಮತ್ತು ಇತರೆಲ್ಲ ಬಿಜೆಪಿ ಶಾಸಕರು ಪರೋಕ್ಷವಾಗಿ ಆರೋಪಿಸಿದರು. ಈ ಬಗ್ಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ, `ಸಂಬAಧಿಸಿದ ವಿವರಗಳನ್ನು ತರಿಸಿಕೊಂಡು ನಾಳೆ ವಿವರ ನೀಡುವುದಾಗಿ’ ತಿಳಿಸಿದರು. ಅಲ್ಲದೇ ಯಾವುದೇ ಸಾಕ್ಷಿ ಅಥವಾ ಆಧಾರ ಇಲ್ಲದೇ ಶಾಸಕರ ಮೇಲೆ ಪ್ರಕರಣ ದಾಖಲಿಸಿದ್ದು ನಿಜವಾದರೆ ಸಂಬAಧಿಸಿದ ಅಧಿಕಾರಿಯ ಮೇಲೆ ಕ್ರಮವಾಗಲಿದೆ ಎಂದು ಪ್ರಕಟಿಸಿದರು.
ಹಲೆ ಮಾಡಿದ್ದು ದೃಢಪಟ್ಟರೆ ರಾಜೀನಾಮೆ : ಶಾಸಕ ಕಾಮತ್
ವಿಧಾನಸಭೆ : ಕ್ಷೇತ್ರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದ ನಂತರ ತಾವು ಯಾರನ್ನಾದರೂ ಹೊಡೆದಿರುವುದು ಸಿಸಿ ಟಿವಿ ಅಥವಾ ಇನ್ನಿತರ ಸಾಕ್ಷ್ಯ ಗಳ ಮೂಲಕ ದೃಢಪಟ್ಟರೆ, ಒಂದು ಕ್ಷಣವೂ ಸದನದಲ್ಲಿ ಕೂರಲ್ಲ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರ ಹೋಗುವುದಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಂಗಳವಾರ ವಿಧಾಸಭೆಯಲ್ಲಿ ಸವಾಲು ಹಾಕಿದರು.
ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ನಡೆದ ಚರ್ಚೆ ಮುಗಿದ ಮೇಲೆ ಎದ್ದು ನಿಂತ ಕಾಮತ್, `ನಾನು ಹಲ್ಲೆ ಮಾಡಿರುವುದು ಸಾಬೀತಾದರೆ ಈ ಸ್ಥಾನದಲ್ಲಿ ಕೂರುವುದಿಲ್ಲ’ ಎಂದು ಭಾವಾವೇಶದಿಂದ ನುಡಿದರು.ಕನಿಷ್ಟಸಾಕ್ಷ್ಯ ಗಳಗಳು ಇಲ್ಲದಿದ್ದರೂ ಅದು ಯಾವರೀತಿ ತಮ್ಮ ವಿರುದ್ಧ ಎಫ್ಐಆರ್ ದಾಖಲಾಯಿತು ಎಂದು ಶಾಸಕರು ಪ್ರಶ್ನಿಸಿದರು. ಎಷ್ಟೋ ಪ್ರಕರಣಗಳಲ್ಲಿ ಎಫ್ಐಆರ್ ಮಾಡಿಕೊಳ್ಳಲು ಹಿಂದೇಟು ಹಾಕುವ ಪೊಲೀಸರು, ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದರ ಹಿಂದೆ ಕಾಂಗ್ರೆಸ್ ಪಕ್ಷದ ರಾಜಕಾರಣವಲ್ಲದೇ ಇನ್ನೇನು ಇರಲು ಸಾಧ್ಯ ಎಂದು ಕಾಮತ್ ಕೇಳಿದರು


