Thursday, March 12, 2026
Flats for sale
Homeಕ್ರೈಂಬೆಂಗಳೂರು : ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಗ್ಯಾಂಗ್ ರೇಪ್.

ಬೆಂಗಳೂರು : ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಗ್ಯಾಂಗ್ ರೇಪ್.

ಬೆಂಗಳೂರು : ದೇಶದಲ್ಲಿ ಎಷ್ಟೋ ಅತ್ಯಾಚಾರದ ವಿದುದ್ದ ಹೋರಾಟ ನಡೆದರೂ ಆಗಾಗ ಒಂದೊಂದು ಇಂತಹ ಪ್ರಕರಣ ಬೆಳಕಿಗೆ ಬರುತ್ತಾ ಇದೆ .ಇದೀಗ ಖಾಸಗಿ ಕಂಪೆನಿಯೊAದರ ಯುವತಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಕೋರಮಂಗಲದಲ್ಲಿ ನಡೆದಿದೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತ ಯುವತಿಯು ಕೋರಮಂಗಲ ಠಾಣೆಗೆ ಧಾವಿಸಿ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ದೂರು ನೀಡಿದ್ದಾಳೆ.

ಕಳೆದ ಡಿ.12 ರ ರಾತ್ರಿ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದು,ಬಳಿಕ ಏನು ಆಯಿತೋ ಏನೋ ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದ್ದಾಗಿ ಹೇಳಿದ್ದಾಳೆ. ತಾನು ಅಲ್ಲಿಗೆ ಹೇಗೆ ಬಂದೆ ಎಂಬುದೇ ತಿಳಿದಿಲ್ಲ ಎಂದಿದ್ದಾಳೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ತನ್ನ ದೇಹದ ಮೇಲೆ ತರಚು ಗಾಯಗಳಾಗಿದ್ದು, ಗ್ಯಾಂಗ್ ರೇಪ್ ಆಗಿದೆ ಎಂಬ ಶಂಕೆ ಇದೆ ಎಂದು ದೂರು ನೀಡಿದ್ದಾಳೆ.

ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂಬ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಿ, ಯುವತಿ ಹೇಳಿದ ಘಟನೆ ನಡೆದ ಸ್ಥಳದ ಸುಮಾರು ೬೦ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular