Tuesday, July 7, 2026
Homeಜಿಲ್ಲೆಕಾಪು : ದತ್ತು ಪುತ್ರಿ ಮನೆಬಿಟ್ಟು ಹೋದ ಕಾರಣ ಮನನೊಂದು ಆತ್ಮಹತ್ಯೆ.

ಕಾಪು : ದತ್ತು ಪುತ್ರಿ ಮನೆಬಿಟ್ಟು ಹೋದ ಕಾರಣ ಮನನೊಂದು ಆತ್ಮಹತ್ಯೆ.

ಕಾಪು : ಸಮಾಜ ಸೇವಕ ಮತ್ತು ರಂಗಕರ್ಮಿ ಕೌಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (58) ಅವರ ಸಾವು ಹಲವು ಪ್ರಶ್ನೆಗಳನ್ನು ಉಂಟುಮಾಡಿದ್ದು ಆತ್ಮಹತ್ಯೆ ಮಾಡಲು ದಂಪತಿಗೆ ಏನು ಕಾರಣ ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಏತನ್ಮಧ್ಯೆ, ತಮ್ಮ ಮನೆಯನ್ನು ತೊರೆದ ದಂಪತಿಗಳ ದತ್ತು ಪುತ್ರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಇಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಮಗಳು ಓಡಿಹೋಗಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಮಗಳು ಒಂದು ಚೀಟಿ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಆದರೆ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ಲೀಲಾಧರ್ ಶೆಟ್ಟಿ ಕೂಡ ಒಂದುಚೀಟಿಯನ್ನು ಬೆರೆದಿಟ್ಟಿದ್ದು ಅದರ ವಿವರಗಳು ಇನ್ನೂ ತಿಳಿದಿಲ್ಲ. ಆದರೆ, ಬಾಕಿ ಇರುವ ಹಣದ ಬಗ್ಗೆ ಹಾಗೂ ತಾವು ಓದಿದ ಕರಂದಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸುವ ಆಶಯವನ್ನು ನೋಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular