Wednesday, March 18, 2026
Flats for sale
Homeರಾಜಕೀಯಬೆಂಗಳೂರು : ಮುಡಾಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ವಿರುದ್ಧ ಸಿದ್ದು ಕೊರೋನಾಸ್ತ್ರ,ಬಿಎಸ್​ವೈ, ರಾಮುಲು ಸಿಕ್ಕಿಸಲು ಸಿದ್ಧತೆ..!

ಬೆಂಗಳೂರು : ಮುಡಾಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ವಿರುದ್ಧ ಸಿದ್ದು ಕೊರೋನಾಸ್ತ್ರ,ಬಿಎಸ್​ವೈ, ರಾಮುಲು ಸಿಕ್ಕಿಸಲು ಸಿದ್ಧತೆ..!

ಬೆಂಗಳೂರು : 2020ರ ಕೋವಿಡ್-19 ಹಗರಣದಲ್ಲಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಿಪಿಇ ಕಿಟ್‌ಗಳ ಖರೀದಿಯಲ್ಲಿ 14.21 ಕೋಟಿ ರು. ಭ್ರಷ್ಟಾಚಾರ ಎಸಗಿರುವುದರಿಂದ ಅವರ ವಿರುದ್ಧ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ನಡೆಸುವಂತೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಆಯೋಗ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಇಬ್ಬರ ವಿರುದ್ಧ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಅಗತ್ಯ ಸಿದ್ಧತೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ. ಕುನ್ಹಾ ಆಯೋಗದ ವರದಿಯು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಶ್ರೀರಾಮುಲು ಅವರ ಪಾತ್ರವನ್ನು ಖಂಡಿಸಿದೆ. ಆಯೋಗವು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಫಾರಸು ಮಾಡಿದ್ದು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

ಕೊರೋನಾ ವೇಳೆ ಸ್ಥಳೀಯ ಕಂಪನಿಗಳಲ್ಲಿ 330 ರು.ಗಳಿಂದ 400 ರು.ಗಳಿಗೆ ಪಿಪಿಇ ಕಿಟ್‌ಗಳು ಲಭ್ಯವಿದ್ದರೂ, ಅಧಿಕಾರಿಗಳ ಸಲಹೆ ನಿರ್ಲಕ್ಷ್ಯ ಮಾಡಿ ಐದು ಪಟ್ಟು ದುಬಾರಿ (ಪ್ರತಿ ಕಿಟ್‌ಗೆ 2,117 ರು.) ಪಾವತಿಸಿ ಚೀನಾದ ಕಂಪನಿಗಳಿಂದ 3 ಲಕ್ಷ ಕಿಟ್‌ ಖರೀದಿಸಲಾಗಿತ್ತು. ಜತೆಗೆ ಹೆಚ್ಚುವರಿಯಾಗಿ ಆಮದು ಮತ್ತು ಸಾಗಣೆ ವೆಚ್ಚ ನೀಡಿ ಕಂಪನಿಗಳಿಗೆ ಲಾಭ ಮಾಡಿಕೊಡಲಾಗಿತ್ತು. ತನ್ಮೂಲಕ 14.21 ಕೋಟಿ ರು.ಗಳ ಭ್ರಷ್ಟಾಚಾರ ಎಸಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ ನಡೆಸುವಂತೆ ಮೈಕಲ್‌ ಕುನ್ಹಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಮ್ಮ ಸರ್ಕಾರ ಇದ್ದಾಗ ಯಶಸ್ವಿಯಾಗಿ ಕೋವಿಡ್​​ ಮಹಾಮಾರಿಯನ್ನು ನಿರ್ವಹಿಸಿತ್ತು. ಜನರ ಜೊತೆಗೆ ನಿಂತುಕೊಂಡು ಜನರ ಜೀವವನ್ನು ಉಳಿಸುವಂತ ಕೆಲಸ ಮಾಡಿತ್ತು. ಈವಾಗ ರಾಜಕಾರಣಕ್ಕೊಸ್ಕರ ಅವರ ಮೇಲೆ ಬಂದಂತ ಹಗರಣವನ್ನು ಮುಚ್ಚಿಕೊಳ್ಳಲು, ನಿನ್ನ ಹಗರಣವನ್ನ ನಾನು ಮುಚ್ಚಿಕೊಳ್ಳುತ್ತೇನೆ ನನ್ನ ಹಗರಣವನ್ನ ನೀನು ಮುಚ್ಚಿಕೊ ಎನ್ನುವ ನಿಟ್ಟಿನಲ್ಲಿ ಸಿಎಂ ಡಿಸಿಎಂ ಒಬ್ಬರಿಗೊಬ್ಬರು ಶಾಮೀಲಾಗಿದ್ದಾರೆ ಎಂದು ಬಿ.ವೈ ರಾಘವೇಂದ್ರ ಕುಟುಕಿದ್ದಾರೆ.

2020ರ ಮಾ.24ರಂದು 656.25 ರು.ಗಳ ದರದಂತೆ ಇಂಡಸ್‌ ಬಯೋ ಸೊಲ್ಯೂಷನ್‌ನಿಂದ 2,000 ಪಿಪಿಇ ಕಿಟ್ ಖರೀದಿಸಲಾಗಿದೆ. ಇನ್ನು ಏ.23ರಂದು ಎಂಟು ಇತರೆ ಕಂಪನಿಗಳಿಂದ 1,444.80 ರು.ಗಳಂತೆ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ತನ್ಮೂಲಕ ಸ್ಥಳೀಯವಾಗಿಯೇ ಪಿಪಿಇ ಕಿಟ್‌ಗಳು ಲಭ್ಯವಿದ್ದವು ಎಂಬುದು ಸಾಬೀತಾಗಿದೆ. ಸ್ಥಳೀಯವಾಗಿ ಅತಿ ಕಡಿಮೆ ದರಕ್ಕೆ ಪಿಪಿಇ ಕಿಟ್ ಲಭ್ಯವಿದ್ದರೂ ಚೀನಾದಿಂದ ದುಬಾರಿ ಬೆಲೆಗೆ ಆಮದು ಮಾಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಜಸ್ಟೀಸ್ ಕುನ್ಹಾ ಆಯೋಗ ಸಲ್ಲಿಸಿರೋ ವರದಿಯಲ್ಲಿ, 2020ರಲ್ಲಿ ಖರೀದಿ ಮಾಡಿದ್ದ ಕುರಿತು ಅಷ್ಟೇ ಉಲ್ಲೇಖವಿದೆ. PPE ಕಿಟ್ ಪೂರೈಕೆ ಮಾಡಿದ್ದ ಚೀನಾ ಕಂಪನಿಗಳಿಗೆ ಬಿಜೆಪಿ ಸರ್ಕಾರ 14 ಕೋಟಿ 21 ಲಕ್ಷ ರೂಪಾಯಿ ಅನಗತ್ಯ ಲಾಭ ಮಾಡಿಕೊಟ್ಟಿರುವ ಆರೋಪವಿದೆ. ಹೀಗಾಗಿಯೇ ಬಿಎಸ್​ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕ್ರಿಮಿನಲ್​ ಪ್ರಾಸಿಕ್ಯೂಷನ್​ಗೆ ಕುನ್ಹಾ ಆಯೋಗ ಶಿಫಾರಸು ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular