Saturday, August 29, 2026
Homeಜಿಲ್ಲೆಬೆಂಗಳೂರು : ಮಂಗಳೂರು ಪಶ್ಚಿಮ ವಲಯಕ್ಕೆ ಹೊಸ DIG : ಅಮಿತ್ ಸಿಂಗ್ ವರ್ಗಾವಣೆ.

ಬೆಂಗಳೂರು : ಮಂಗಳೂರು ಪಶ್ಚಿಮ ವಲಯಕ್ಕೆ ಹೊಸ DIG : ಅಮಿತ್ ಸಿಂಗ್ ವರ್ಗಾವಣೆ.

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆ ಮಾಡಲಾಗಿದ್ದು, ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಗಳೂರು ಪಶ್ಚಿಮ ವಲಯದ IGP ಆಗಿದ್ದ ಅಮಿತ್ ಸಿಂಗ್, IPS (KN 2007) ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ IGP ಆಗಿ ವರ್ಗಾವಣೆ ಮಾಡಲಾಗಿದೆ. ಅಮಿತ್ ಸಿಂಗ್ ಅವರ ಸ್ಥಾನಕ್ಕೆ ಆರ್. ಚೇತನ್, IPS (KN 2010) ಅವರನ್ನು ಮಂಗಳೂರು ಪಶ್ಚಿಮ ವಲಯದ DIG ಆಗಿ ನೇಮಕ ಮಾಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ವರ್ಗಾವಣೆ ಆದೇಶದಂತೆ ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಆಡಳಿತದಲ್ಲಿ ಮಹತ್ವದ ಬದಲಾವಣೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular