ಬೆಂಗಳೂರು : ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರಿಗರಿಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಶುಭಸುದ್ದಿ ನೀಡಿದ್ದಾರೆ. ಸಿಲಿಕಾನ್‌ಸಿಟಿಗೆ ಪಾಡ್ ಟ್ಯಾಕ್ಸಿ, ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಹಾಗೂ ತಂತ್ರಜ್ಞಾನ ಬಳಸಿಕೊAಡು ಪಿಲ್ಲರ್ ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆಯ ಪ್ರಾಯೋಗಿಕ ಜಾರಿಗೆ ಪ್ರಸ್ತಾಪಿಸಿದ್ದು ಇದೊಂದು ನಗರ ಸಾರಿಗೆಯಲ್ಲಿ ಕ್ರಾಂತಿಕಾರಕ ನಿರ್ಧಾರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾರಾಷ್ಟçದ ನಾಗಪುರದಲ್ಲಿ ಎಲೆಕ್ಟಿçಕ್ ರ‍್ಯಾಪಿಡ್ ಟ್ರಾನ್ಸ್ಪೋರ್ಟ್ ಸಿಸ್ಟಮ್ ಟೆಂಡರ್ ಆಹ್ವಾನಿಸುವ ಹಂತಕ್ಕೆ ಬಂದಿದೆ. 135 ಆಸನಗಳ ಅತ್ಯಾಧುನಿಕ ಹವಾನಿಯಂತ್ರಿ ಎಲೆಕ್ಟಿçಕ್ ಬಸ್‌ಅನ್ನು ಪ್ರಾಯೋಗಿಕವಾಗಿ ತಾವು ಪರತಿನಿಧಿಸುವ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಜಾರಿಗೊಳಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಈ ಬಸ್ ಗಂಟೆಗೆ 120 ರಿಂದ 125 ಕಿಮೀ ವೇಗದಲ್ಲಿ ಸಂಚರಿಸಲಿದೆ.
ಜೊತೆಗೆ ಈಗಿನ ಡೀಸೆಲ್ ಬಸ್‌ಗಳಿಗಿಂತ ಸಾಗಣೆ ವೆಚ್ಚ ಶೇ.30ರಷ್ಟು ಕಡಿಮೆಯಾಗಲಿದೆ. ಜೊತೆಗೆ ಮಾಲಿನ್ಯರಹಿತವಾಗಿರಲಿದೆ. ಎಲೆಕ್ಟಿçಕ್ ರ‍್ಯಾಪಿಡ್ ಬಸ್ ಅನ್ನು ಬೆಂಗಳೂರು- ಚೆನ್ನೈ ನಗರಗಳ ನಡುವೆ ಜಾರಿಗೊಳಿಸುವ ಯೋಜನೆ ಇದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ
ಏನಿದು ಪಾಡ್ ಟ್ಯಾಕ್ಸಿ ?
ಬೆಂಗಳೂರಿನಲ್ಲಿ ಪಾಡ್ ಟ್ಯಾಕ್ಸಿ ಜಾರಿ ಬಗ್ಗೆಯೂ ಸಚಿವ ಗಡ್ಕರಿ ಉಲ್ಲೇಖಿಸಿದ್ದಾರೆ. ಪಾಡ್ ಟ್ಯಾಕ್ಸಿಗಳು ರಸ್ತೆಯ ಬದಲಿಗೆ ಆಗಸದಲ್ಲಿ ಕೇಬಲ್ ಮೂಲಕ ಚಲಿಸುವ ವಾಹನಗಳು. ಇದು ಸಣ್ಣ ಕಾರಿನ ರೀತಿ ಇರಲಿದ್ದು ಒಂದರಲ್ಲಿ 4-೬ ಜನ ಪ್ರಯಾಣಿಸಬಹುದು. ಗಂಟೆಗೆ 60-120 ಕಿಮೀ ವೇಗದಲ್ಲಿ ಪಾಡ್ ಟ್ಯಾಕ್ಸಿಗಳು ಟ್ರಾಫಿಕ್ ಸಮಸ್ಯೆ ಇಲ್ಲದೆ ಸಂಚರಿಸುತ್ತವೆ. ಇವು ಸಂಚಾರಕ್ಕೆ ಸ್ವಲ್ಪ ದುಬಾರಿ. ಆದರೆ ತುರ್ತು ಸಂದರ್ಭದಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸಂಚಾರ ಮಾಡಬಹುದಾಗಿದೆ.


