Thursday, July 23, 2026
Homeರಾಜ್ಯಬೆಂಗಳೂರು : ಬೆಂಗಳೂರಿನ ಇಂದಿರಾ ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ, ಐವರಿಗೆ ಗಂಭೀರ ಗಾಯ.

ಬೆಂಗಳೂರು : ಬೆಂಗಳೂರಿನ ಇಂದಿರಾ ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ, ಐವರಿಗೆ ಗಂಭೀರ ಗಾಯ.

ಬೆಂಗಳೂರು : ಬೆಂಗಳೂರಿನ ಇಂದಿರಾನಗರದ ರಾಮೇಶ್ವರಂ ಕೆಫೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 7 ಜನರು ಗಾಯಗೊಂಡಿದ್ದು ಐವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಪ್ರಾಥಮಿಕವಾಗಿ ಸಿಲಿಂಡರ್ ಬ್ಲಾಸ್ಟ್ ಆಗಿರುವ ಸಾಧ್ಯವಿಲ್ಲ ಎಂದು ಖಚಿತ ಪಡಿಸಿದ್ದಾರೆ. ಜಿಲೇಟಿನ್ ಕಡ್ಡಿಗಳಿಂದ ಸ್ಪೋಟವಾಗಿದ್ಯಾ? ಮೈಕ್ರೊ ಓವನ್‌ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದ್ಯಾ ಎಂಬುದನ್ನೂ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳಿಂದಲೇ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬಯಲಾಗಬೇಕಿದೆ. ಇತ್ತ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸರು ಸ್ಥಳದಿಂದ ಬ್ಯಾಟರಿಗಳಿರುವ ಬ್ಯಾಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಗಾಯಗೊಂಡಿರುವ ಮಹಿಳಾ ಬ್ಯಾಂಕ್ ಅಧಿಕಾರಿಯ ಗುರುತಿನ ಚೀಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಅಂಬಾನಿ ಕುಟುಂಬದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಇದೇ ರಾಮೇಶ್ವರ ಕೆಫೆ ಕ್ಯಾಟರಿಂಗ್ ವಹಿಸಿಕೊಂಡಿದೆ. ಅಲ್ಲದೇ ಭಾರತದ್ಯಾಂತ ಕ್ಯಾಟರಿಂಗ್ ವಿಸ್ತರಿಸಲು ನಿರ್ಧಾರಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯುಸನೆಸ್‌ ಸಂಬಂಧ ಸ್ಪೋಟಿಸಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ಮಧ್ಯಾಹ್ನ 1.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಹೋಟೆಲ್‌ನಲ್ಲಿ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.ಕೈ ತೊಳೆಯುವ ಸಿಂಕ್ ಇಟ್ಟಿದ್ದ ಜಾಗದಲ್ಲಿ ಇದ್ದ ಬ್ಯಾಗ್ ಸ್ಪೋಟ ನಡೆದಿದ್ದು, ಇದು ಬೇಕೆಂತಲೇ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಸಿ ಸಿ ಕ್ಯಾಮರಾ ಪರೀಲನೆ ನಡೆಸಲಾಗುತ್ತಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ.  ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ FSL ತಂಡ ಪರಿಶೀಲನೆ ನಡೆಸಿದೆ. ಅಲ್ಲದೇ ಸ್ಥಳಕ್ಕೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ಶ್ವಾನ ದಳ  ಬಂದಿದ್ದು, ತಪಾಸಣೆ ನಡೆಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular