ಬೆಂಗಳೂರು : ನಟಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಐಆರ್, ಸಿಬಿಐ ತನಿಖೆ ನಡೆಸಿದ ನಂತರ ಈಗ ಜಾರಿನಿರ್ದೇಶನಾಲಯ (ಇಡಿ) ಪ್ರವೇಶ ಮಾಡಿದ್ದು, ಗುರುವಾರ ಏಳು ಅಧಿಕಾರಿಗಳ ತಂಡ ರನ್ಯಾರಾವ್‌ಗೆ ಸಂಬಂದಿಸಿದ ಎಂಟು ಕಡೆ ದಾಳಿ ನಡೆಸಿದ್ದಾರೆ. ಆ ಮೂಲಕ ಮೂರು ತನಿಖಾ ಸಂಸ್ಥೆಗಳೀಗ ರನ್ಯಾ ರಾವ್ ಪ್ರಕರಣದ ತನಿಖೆ ಕೈಗೊಂಡAತಾಗಿದೆ.
ಬೆಳಗ್ಗೆ ಲ್ಯಾವಲ್ಲಿ ರಸ್ತೆಯಲ್ಲಿರುವ ರನ್ಯಾರಾವ್ ಮನೆ, ಆಕೆಯ ಪತಿ ಜತಿನ್ ಹುಕ್ಕೇರಿ, ಹಲವು ಪೊಲೀಸ್ ಅಧಿಕಾರಿಗಳು, ಸ್ವಾಮೀಜಿ, ಕೋರಮಂಗಲದಲ್ಲಿರುವ ನಟಿಯ ಗೆಳೆಯ, ಸಂಬAಧಿಕರ ಮನೆಗಳ ಮೇಲೆ ಇ.ಡಿ ಅಧಕಾರಿಗಳು ದಾಳಿ ನಡೆಸಿದ್ದಾರೆ. ಎಷ್ಟು ದಿನದಿಂದ ಈ ಐಷಾರಾಮಿ ಮನೆಯಲ್ಲಿ ವಾಸವಿದ್ದರು, ಅವರ ಆದಾಯದ ಮೂಲ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಇದೇ ಅಪಾರ್ಟ್ಮೆಂಟ್‌ನಲ್ಲಿ ಡಿ.ಆರ್.ಐ ಅಧಿಕಾರಿಗಳ ತಂಡ ಇತ್ತೀಚೆಗೆ ದಾಳಿ
ನಡೆಸಿ 2.47 ಕೆ.ಜಿ.ಚಿನ್ನ,2.6 ಕೋಟಿ ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈಗ ಇ.ಡಿ ದಾಳಿ ನಡೆಸಿದೆ.
ಮಧ್ಯಾಹ್ನದ ಊಟವನ್ನು ರನ್ಯಾ ಮನೆಗೆ ತರಸಿಕೊಂಡಿರುವ ಅಧಿಕಾರಿಗಳು ವಿವಿಧ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ. ರನ್ಯಾಳ ಸ್ನೇಹಿತ ಹಾಗೂ ಉದ್ಯಮಿ ತರುಣ್‌ರಾಜ್ ಅವರ ನಿವಾಸದ ಮೇಲೆ ಸಹ ಇಡಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಚಿನ್ನ ಮತ್ತು ಹಣ ವರ್ಗಾವಣೆಯಾಗಿರುವ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಆರ್.ಟಿ.ನಗರದಲ್ಲಿ ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದ ಸ್ವಾಮೀಜಿ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳ ಮನೆ, ಏರ್‌ಪೋರ್ಟ್ರವರೆಗೆ ಎಸ್ಕಾಟ್ ಒದಗಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಆರ್‌ಐ ದಾಳಿ: ಈ ಹಿಂದೆ ರನ್ಯಾ ಮನೆಯ ಮೇಲೆ ದಾಳಿ ನಡೆಸಿದ್ದ ಡಿಐಆರ್ ಅಧಿಕಾರಿಗಳು ಗುರುವಾರವೂ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಎರಡನೇ ಆರೋಪಿ ತರುಣ್ ಕೊಂಡೂರು ರಾಜು ನಿವಾಸದ ಮೇಲೂ ಇಡಿ ದಾಳಿ ನಡೆದಿದೆ. ತರುಣ್ ರಾಜ್ ರನ್ಯಾ ಆಪ್ತ ಸ್ನೇಹಿತನಾಗಿದ್ದರು. ತೆಲುಗು ಸಿನಿಮಾದಲ್ಲಿ ಅವರು ಬ್ಯುಸಿ ಇದ್ದರು. ಮೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ತರುಣ್ ರಾಜ್ ನಟಿಸಿದ್ದರು. ತೆಲುಗಿನಲ್ಲಿ ಇವರು ವಿರಾಟ್ ಎಂದೇ ಫೇಮ್ ಆಗಿದ್ದಾರೆ.