ಬೆಂಗಳೂರು : ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಹೋಟೆಲ್, ಖಾನಾವಳಿ, ಪಿಜಿ, ಆಟೋಗಳಿಗೆ ತಗುಲಿದ ಗ್ಯಾಸ್ಟ್ರಬಲ್ ಇದೀಗ ದೇವಸ್ಥಾನದ ಸನ್ನಿಧಿಗೂ ಬಂದಿದೆ. ಘಾಟಿ ಸುಬ್ರಮಣ್ಯ ದೇವಸ್ಥಾನದಿಂದ ಹಿಡಿದು ಕುಕ್ಕೆ ಸುಬ್ರಮಣ್ಯ ದೇವಸ್ಥಾನದವರೆಗೆ ಬಹುತೇಕ ದೇವಾಲಯಗಳಲ್ಲಿ ದಿನ ನಿತ್ಯದ ಪ್ರಸಾದ, ಅನ್ನ ಸಂತರ್ಪಣೆ ಸ್ಥಗಿತಗೊಂಡಿದೆ. ಇನ್ನೂ ಕೆಲ ದೇವಸ್ಥಾನಗಳಲ್ಲಿ ಶುಕ್ರವಾರ ಅಥವಾ ಶನಿವಾರದವರೆಗೆ ಮಾತ್ರ ಅದೂ ಸ್ವಲ್ಪ ಪ್ರಸಾದ ಮಾಡುವಷ್ಟು ಮಾತ್ರ ಸಿಲಿಂಡರ್ ಮಿಕ್ಕಿದೆ.
ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಹೋಟೆಲ್ಗಳ ಮುಂದೆ , ಎಲ್ಪಿಜಿ ಸಿಲಿಂಡರ್ ಕೊರತೆಯಿAದ ಹೋಟೆಲ್ಗಳನ್ನು ಬಂದ್ ಮಾಡಲಾಗಿದೆ ಗ್ರಾಹಕರು ಸಹಕರಿಸಬೇಕು’ ಎಂಬ ಬೋರ್ಡುಗಳು ರಾರಾಜಿಸುತ್ತಿವೆ. ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದಲ್ಲಿ ಎಲ್ಪಿಜಿ ಅಭಾವ ಸೃಷ್ಟಿಯಾಗಿದೆ. ಇದರ ಪರಿಣಾಮ ಮಹಾರಾಷ್ಟç, ಚೆನ್ನೆöÊ ಸೇರಿದಂತೆ ಕೆಲವೆಡೆ ಈಗಾಗಲೇ ಹೋಟೆಲ್ಗಳು ಬಂದ್ ಆಗಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಶೇ.25ರಷ್ಟು ಎಲ್ಪಿಜಿ ಉತ್ಪಾದನೆ ಹೆಚ್ಚಳ ಮಾಡುವಂತೆ ಕೇಂದ್ರಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲಿ ಎಲ್ಪಿಜಿ ಕೊರತೆ ಆಗಲಿದೆ ಎಂಬ ಆತಂಕ ಬೇಡ ಎಂದು ಪಟ್ರೋಲಿಯಂ ಸಚಿವಾಲಯ ಗ್ರಾಹಕರಿಗೆ ಭರವಸೆ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವಾಲಯ, ತಪ್ಪು ಮಾಹಿತಿಯಿಂದಾಗಿ ಜನರು ಆತಂಕಗೊAಡು ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಪ್ರಸ್ತುತ ಸಿಲಿಂಡರ್ ವಿತರಣೆ ಎಂದಿನAತೆ 2.5 ದಿನದಲ್ಲೇ ಮುಂದುವರಿಯಲಿದೆ ಎAದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಕಾಳಸಂತೆ ತಡೆಗಟ್ಟಲು ಎರಡು ಬುಕ್ಕಿಂಗ್ಗಳ ನಡುವಿನ ಅಂತರವನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಮನೆಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೂ ಪೂರೈಕೆ ಖಚಿತಪಡಿಸಲಾಗಿದೆ. ತೈಲ ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರ್ಯಾಯ ಮಾರ್ಗಗಳ ಮೂಲಕ ಇಂಧನ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.


