Tuesday, October 21, 2025
Flats for sale
Homeವಾಣಿಜ್ಯಬೆಂಗಳೂರು : ತನ್ನ ಗ್ರಾಹಕರ ಮೇಲಿನ ಆರ್ಥಿಕ ಹೊರೆ ರೆಪೊ ಲಿಂಕ್ಡ್ ಸಾಲದ ಬಡ್ಡಿ ದರ...

ಬೆಂಗಳೂರು : ತನ್ನ ಗ್ರಾಹಕರ ಮೇಲಿನ ಆರ್ಥಿಕ ಹೊರೆ ರೆಪೊ ಲಿಂಕ್ಡ್ ಸಾಲದ ಬಡ್ಡಿ ದರ ಕಡಿಮೆ ಮಾಡಿದ ಕೆನರಾಬ್ಯಾಂಕ್..!

ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ರೆಪೊ ದರವನ್ನು ಶೇ.6.25 ರಿಂದ ಶೇ.6ಕ್ಕೆ ಇಳಿಸಿದ ನಿರ್ಧಾರವನ್ನು ಅನುಸರಿಸಿ ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕ್ರಮದಲ್ಲಿ ರೆಪೊ ಲಿಂಕ್ಡ್ ಲೆಂಡಿಂಗ್ ದರವನ್ನು 25 ಬೇಸಿಸ್ ಪಾಯಿಂಟ್ ಗಳನ್ನೂ ಕಡಿಮೆ ಮಾಡಿದೆ.

ಕೆನರಾ ಬ್ಯಾಂಕ್ ಏ.12ರಿಂದಲೇ ಈ ಕ್ರಮವನ್ನು ಪಾಲಿಸಿ, ಎಲ್ಲಾ ಸಾಲಗಳ ಕನಿಷ್ಠ ಬಡ್ಡಿದರವನ್ನು ಕಡಿಮೆ ಮಾಡಿದೆ. ಇದರಿಂದ ಹೊಸ ಸಾಲಗಾರರಿಗೆ ಕಡಿಮೆ ಕಂತುಗಳು ಮತ್ತು ಮನೆ ಅಥವಾ ವಾಹನವನ್ನು ಖರೀದಿಸಲು ಯೋಜಿಸುವ ಗ್ರಾಹಕರಿಗೆ ಅನುಕೂಲ ಆಗಲಿದೆ.ಬಡ್ಡಿದರ ಕಡಿಮೆ ಮಾಡಿದ್ದರಿಂದ ಪ್ರಸ್ತುತ ವಸತಿ ಸಾಲ ವರ್ಷಕ್ಕೆ ಶೇ.7.9೦ರಿಂದ ಪ್ರಾರಂಭವಾದರೇ ವಾಹನ ಸಾಲಗಳು ಶೇ.8.2೦ರಿಂದ ಆರಂಭವಾಗುತ್ತವೆ. ಇದರಿಂದ ಗ್ರಾಹಕರ ಕನಸುಗಳು ಆರ್ಥಿಕ ಗುರಿಗಳೊಂದಿಗೆ ಮುಂದುವರಿಯಲು ಸಹಾಯಕವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular