ಬೀದರ್ : ರೈಲು ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿ ರೈಲು ಕೆಳಗೆ ಬೈಕ್ ಸಿಕ್ಕಿಕೊಂಡ ಘಟನೆ ಬೀದರ್ ನಗರದ ನೌಬಾದ್ ಬಳಿ ನಡೆದಿದೆ.
ರೈತ ಜಮೀನಿಗೆ ತೆರಳುವಾಗ ಕಲಬುರಗಿಯಿಂದ ಬೀದರ್ ಮದ್ಯೆ ಸಂಚರಿಸುವ ವೇಳೆ ಹಾಲಿ ದಾಟುವಾಗ ರೈಲು ಬಂದಿದ್ದು ಸಮಯ ಪ್ರಜ್ಞೆ ಮೆರೆದು ರೈತ ಬೈಕ್ ಬಿಟ್ಟು ಓಡಿಹೋಗಿದ್ದಾನೆ.ರೈಲಿನ ಸದ್ದು ಕೇಳಿ ಬೈಕ್ ಬಿಟ್ಟು ಪ್ರಾಣ ಉಳಿಸಿಕೊಂಡಿದ್ದು ಡಿಕ್ಕಿ ರಭಸಕ್ಕೆ ರೈಲಿನಡಿಗೆ ಬೈಕ್ ಸಿಲುಕಿ ನಜ್ಜುಗುಜ್ಜಾಗಿದೆ.


